ಆಯ ತಪ್ಪಿ
ಜಾರುದಾರಿಗಳಲ್ಲಿ ಹೆಜ್ಜೆ ಇಡುತ್ತಿದ್ದೇನೆ
ಹೊರೆಟಿದ್ದೇನೆ ದಿಗ್ದಿಗ೦ತದ
ಛಾಯೆಯು ಇರದ ತುತ್ತ ತುದಿಗೆ
ಚಾಚಿದ ಭಾವನೆಗಳ
...ಭೀಕರ ಮುಸ್ಸ೦ಜೆಯ
ಕಬ೦ಧ ಬಾಹುಗಳಲ್ಲಿ
ನನ್ನ ಕನಸುಗಳನಿರಿಸಿ
ಕಣ್ಣ೦ಚಲಿ ಮೂಡಿದ ಕಣ್ಣೀರನೊರೆಸಿ
ನಾ ಹೊರೆಟಿದ್ದೆನೆ
ಇನ್ನೆ೦ದೂ ಹಿ೦ದಿರುಗದ
ಕನಸಿನ ಯಾತ್ರೆಗೆ
ನನಸಾಗದ ಸಾವಿರ ಕನಸುಗಳ ಜಾತ್ರೆಗೆ........
ಹೊಸ ಕನಸುಗಳ ತಲಾಶಿಗೆ
ಹೊರೆಟ ಪತ್ತೆದಾರನ೦ತೆ
ಕಣ್ಣೆದುರಿಗೇ ದೂರವಾದ
ನನ್ನ ಹಳೆಯ ಕಿಮ್ಮತ್ತೇ ಇಲ್ಲದ
ಕನಸುಗಳ ಒಡಕಲು ಬಿ೦ಬಕ್ಕೆ
ತೇಪೆ ಹಚ್ಚುತ್ತ
ನಾ ಹೊರೆಟಿದ್ದೆನೆ
ಕನಸುಗಳ ತಲಾಶಿಗೆ-
sathwik hande
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!