---------------------------------------------------------

ಮನವು ಹಾರಿದೆ ಚಿಟ್ಟೆಯಾಗಿ ದೂರ ದೂರ ಬಹುದೂರ 


ಕಹಿನೆನಪ ಬೀಲಿಯನು ಹಾರಿ ,

ನೆನಪುಗಳ ಹೂದೋಟಕೆ ತೂರಿ, 

ಸಿಹಿನೆನಪ ಮಧುವನ್ನು ಹೀರಿ ,

ಮನವು ಹಾರಿದೆ ಚಿಟ್ಟೆಯಾಗಿ ದೂರ ದೂರ ಬಹುದೂರ


ಚಿಂತೆಗಳ ಸುಳಿಯಿಂದ ಜಾರಿ 

ಅವಕಾಶದಲೆಗಳಲಿ ತೇಲಿ 

ಮನವು ಹಾರಿದೆ ಚಿಟ್ಟೆಯಾಗಿ ದೂರ ದೂರ ಬಹುದೂರ


ನೂರು ಭಾವದ, ನೂರು ಬಣ್ಣ ಬೆರೆಸಿ 

ಮನದ ರಂಗೋಲಿ, ಭುವಿಯ ಶೃಂಗಾರ ರೆಕ್ಕೆಮೇಲಿಳಿಸಿ 

ಮನವು ಹಾರಿದೆ ಚಿಟ್ಟೆಯಾಗಿ ದೂರ ದೂರ ಬಹುದೂರ


ಹಾರಿದೆ ಭುವಿಯಂಚಿಗೆ, ಹಾರಿದೆ ಬಾನಂಚಿಗೆ 

ಮನವು ಹಾರಿದೆ ಚಿಟ್ಟೆಯಾಗಿ ದೂರ ದೂರ ಬಹುದೂರ

---------------------------------------------------------