ತಥ್ಯ:
ನಾವ್ ಚಿಕ್ಕೊರಾಗಿದ್ದಾಗ, ಅವ್ರು ಹೀಗ್ ತ್ಯಾಗ ಮಾಡಿದ್ರು, ಇನ್ನೊಬ್ಬರು ಪ್ರಾಣಾನೆ ತೆತ್ರು, ಇವ್ರು ನೋಡಿ, ತಮ್ಮ ಕಣ್ ನೇ ಕಿತ್ತು ಕೊಟ್ರು, ಒಂದ್ ರೂಪಾಯ್ ಲೆಕ್ಕಚಾರ್ದಲ್ಲಿ ವ್ಯತ್ಯಾಸ ಆಗಿದ್ದಕ್ಕೆ ಅವ್ರು ಮನೇಗ್ ಹೊಗ್ದೆ ರಾತ್ರಿಯೇಲಾ ಆಫೀಸ್ ನಲ್ಲೆ ಕಣ್ಣಲ್ಲಿ ಕಣ್ಣಿಟ್ಟು ಕೊಂಡು ಲೆಕ್ಕ ಮಾಡಿ ಒಪ್ಪಿಸಿ ಬೆಳಿಗ್ಗೆ ಮನೆಗೆ ಬಂದರು, ಇತ್ಯಾದಿ, ಇತ್ಯಾದಿ, ಅನ್ನೋದನ್ನ ಓದಿ, ಓದಿ ತೃಪ್ತಿ ಪಡ್ತಿದ್ವಿ !
ಆದರೆ ಈಗ,
ಬೆಳಗಾದ್ರೆ, ೩೦ ಲಕ್ಷ ಬ್ಯಾಂಕಿನಿಂದ ಹಾಡು ಹಗಲಿನಲ್ಲೇ ದೋಚ್ಕೊಮ್ದು ಹೋದರು, ಯಾರೋ ಮನೆಗೆ ಕನ್ನ ಹಾಕಿದರು ಇತ್ಯಾದಿಗಳೇ ಕಣ್ಣಿಗೆ ಬೀಳುತ್ತವೆ. ಆದರೆ ಕೆಳಗಿನ ಸುದ್ದಿ ಓದಿ ನನಗೆ ತುಂಬಾ ಆನಂದ ಆಯ್ತು !
‘ಮುಂಬೈನ ಉಪನಗರ ವಸಾಯ್ (ಪಶ್ಚಿಮ) ನಲ್ಲಿ ಒಂದು ಚಿಕ್ಕ ಲಾಂಡ್ರಿ ಇದೆ. ಅಲ್ಲಿ ನಡೆದ ಸಾಮಾನ್ಯ ಘಟನೆ (?!)’ :
ಆದರೆ ಇದು ಅಸಾಮಾನ್ಯ ಸಂಗತಿ ಎನ್ನುವುದನ್ನು ಎಲ್ಲರೂ ಒಪ್ಪಬೇಕು ಮತ್ತು ಇಂತಹ ಉತ್ತಮ ಕಾರ್ಯವನ್ನು ಶ್ಲಾಘಿಸಿ ತಾವೂ ಜೀವನದಲ್ಲಿ ಅಂತಹ ಶುದ್ಧ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು.
ಆದದ್ದೇನು :
ತಮ್ಮ ಧೋಬಿ ಅಂಗಡಿಗೆ ಕುಲ್ದೀಪ್ ಮಲ್ಲಿಕ್ ಎಂಬ ಫೋಟೋಗ್ರಾಫರ್ ಬಟ್ಟೆ ಒಗೆಯಲು ಮತ್ತು ಇಸ್ತ್ರಿಮಾಡಲು ಬಟ್ಟೆ ಕೊಟ್ಟು ಮನೆಗೆ ಹೊದರು. ಕುಲ್ದೀಪ್ ರವರ ಪ್ಯಾಂಟಿನ ಜೇಬಿನಲ್ಲಿ ೧೫ ಸಾವಿರ ರೂಪಾಯಿ (೫೦೦ ರೂಗಳ ನೋಟುಗಳು) ಇದ್ದದ್ದನ್ನು ಕಂಡು ಆ ಲಾಂಡ್ರಿಯ ಮಾಲೀಕರು, ಅದನ್ನು ಜೋಪಾನವಾಗಿ ತೆಗೆದಿಟ್ಟು ಫೋನ್ ಮಾಡಿ ಕರೆದು ಅವರಿಗೆ ಮುಟ್ಟಿಸಿದರು. ಮಲ್ಲಿಕ್ ಯಾವುದೋ ಫೋಟೋಗ್ರಾಫಿಕ್ ಅಸೈನ್ ಮೆಂಟ್ ಗೆ ಮುಂಗಡ ೧೫ ಸಾವಿರ ರೂ ಹಣವನ್ನು ತಮ್ಮ ಗಿರಾಕಿಯಿಂದ ಪಡೆದಿದ್ದರು.
ವಸಾಯಿ ಪರಿಸರ :
ವಸಾಯಿನ ಸಂದೋರ್ ಪರಿಸರದಲ್ಲಿ ತಮ್ಮ ಲಾಂಡ್ರಿಯನ್ನು ನಡೆಸುತ್ತಿದ್ದ ಉಶಾದೇವಿ, ಮತ್ತು ಓಂಪ್ರಕಾಶ್ ಸಿಂಗ್ ದಂಪತಿಗಳು ಅಭಿನಂದನಾರ್ಹರು. ಸಾಮಾನ್ಯವಾಗಿ ಮಲಿನವಾದ ವಸ್ತ್ರಗಳ ಜೇಬನ್ನು ತಪಾಸುಮಾಡಿ ಅವನ್ನು ಒಗೆಯಲು ಸಿದ್ಧಪಡಿಸುವ ಪರಿಕ್ರಮದಲ್ಲಿ ಮತ್ತೊಬ್ಬ ಕಸ್ಟಮರ್ ಜೇಬಿನಲ್ಲಿ ೧.೫ ಲಕ್ಷ ಬೆಲೆಬಾಳುವ ಬಂಗಾರದ ಚೈನ್ ಸಿಕ್ಕಿದ್ದನ್ನೂ ವಾಪಸ್ ಮಾಡಿದರು.
ನಿಷ್ಥಾವಂತ ದಂಪತಿಗಳು :
ಉಶಾದೇವಿಯವರ ಕಿಡ್ನಿ ವೈಫಲ್ಯದಿಂದ ಬಹಳ ಮಾನಸಿಕ ಆಘ್ಹಾತಕ್ಕೊಳಗಾದ ದಂಪತಿಗಳು ದುಂಖಃವನ್ನು ನುಂಗಿಕೊಂಡು ಜೀವನ ಸಾಗಿಸುತ್ತಿದ್ದಾರೆಯೇ ಹೊರತು ಈ ತರಹದ ಹಣವನ್ನು ಇಟ್ಟುಕೊಳ್ಳಲು ಇಚ್ಛಿಸಲಿಲ್ಲ. (ಹೀಗೆ ಮರೆತು ಹಲವಾರು ಬಾರಿ ಸಿಕ್ಕ ಹಣವನ್ನು ವಾಪಸ್ ಕೊಟ್ಟಿದ್ದಾರೆ).
ತಮ್ಮದಲ್ಲದ್ದರ ಆಶೆ ಏಕೆ :
ಈಗ ಮಲ್ಲಿಕ್ ರಿಗೆ ಬಹಳ ಸಂತೋಷವಾಗಿ ೧೦ ಸಾವಿರ ರೂಪಾಯಿಗಳನ್ನು ಓಂಪ್ರಕಾಶ್ ರಿಗೆ ಬಹುಮಾನವಾಗಿ ಕೊಡಲು ಮುಂದೆ ಬಂದಾಗ ಓಂಪ್ರಕಾಶ್ ದಂಪತಿಗಳು ಅದನ್ನು ನಿರಾಕರಿಸಿದರು. ಕುಲ್ದೀಪ್ ಮಲ್ಲಿಕ್ ಅವರಿಗೆ ಒಂದು ಹೊಸ ಶರ್ಟ್ ಮತ್ತು ಸೀರೆಯನ್ನು ಉಡುಗೊರೆಯಾಗಿ ಕೊಟ್ಟರು. ಹೀಗೆ ಅನೇಕರು ತಮ್ಮ ವಸ್ತ್ರಗಳಜೊತೆ ಹಣ, ಒಡವೆ ಮತ್ತು ಮುಖ್ಯ ಕಾಗದ ಪತ್ರಗಳನ್ನೂ ಬಿಟ್ಟಿದ್ದು ಅವನ್ನು ಈ ದಂಪತಿಗಳು ಸರಿಯಾಗಿ ವಾಪಸ್ ತಲುಪಿಸಿದ್ದಾರೆ. ಅದರಿಂದ ಅವರ ಮನಸ್ಸಿಗೆ ಬಹಳ ನೆಮ್ಮದಿ ಸಿಕ್ಕೆದೆ. ಏನೋ ಒಂದು ಉತ್ತಮ ಕಾರ್ಯ ತಮ್ಮಿಂದ ಜರುಗಿತಲ್ಲಾ ಎಂದು ಅವರು ಪರಮಮಾತ್ಮನನ್ನು ಅಭಿನಂದಿಸುತ್ತಾರೆ. ಅವನ್ನು ನಾವು ಸ್ವಲ್ಪವೂ ಮುಕ್ಕಾಗದಂತೆ ವಾಪಸ್ ಮಾಡಿದ್ದೇವೆ. ನಮಗೆ ಸೇರಿದ್ದು ಮಾತ್ರ ನಮಗೆ ಭಗವಂತನು ಕೊಡುತ್ತಾನೆ ನಮ್ಮದಲ್ಲದ್ದನ್ನು ಕಟ್ಟಿಕೊಂಡು ನಮಗೇನು ? ಎನ್ನುತ್ತಾರವರು. ಹೀಗೆ ನಿಸ್ಪೃಹತೆಯಿಂದ ಕೆಲಸಮಾಡುವ ಜನ ಸ್ವಲ್ಪವಾದರೂ ಇದ್ದಾರಲ್ಲ ಎನ್ನುವುದು ಮನಸ್ಸಿಗೆ ಮುದಕೊಡುವ ಸಂಗತಿ.
ಇಂತಹವರ ಸಂತತಿ ಇಮ್ಮಡಿಸಲಿ. ಸತ್ಯಮೇವಜಯತೆ..
ಮುಂಬೈ ಮಿರರ್, ಶನಿವಾರ, ಆಗಸ್ಟ್ ೧೭, p.6 ೨೦೧೩
ವರದಿ : ಹೊರಂಲವೆಂ, ಮುಂಬೈ
ಪ್ರತಿಕ್ರಿಯೆ (1)