ಅವಳು ಆತ್ಮ ಸಂಗಾತಿ
ಯಾರೇ ಬಂದರು.
ಇನ್ಯಾರೇ ಹೋದರು.
ಅವಳು ಮಾತ್ರ ಮರೆತುಹೋಗೋದಿಲ್ಲ.
ಮನಸ್ಸಿನ ಭಾವನೆಯ ಅಲೆಗಳ
ಅಬ್ಬರ ದಿನವೂ ಹೆಚ್ಚುತ್ತದೆ.
ಅವಳು ಎಂದೂ ತೇಲಿ ಹೋಗುವದಿಲ್ಲ.
ನನ್ನ ಹೃದಯದ ಬಡಿತ ಹೆಚ್ಚುತ್ತದೆ. ಅವಳ
ಮಿಡಿತ ಎಂದೂ ಮುಗಿಯೋದೆಯಿಲ್ಲ.
ಜೊತೆಯಾಗಿದ್ದೇವೆ ಕಳೆದ ನಾಲ್ಕು ವರ್ಷದಿಂದ.
ಈ ದಿನಗಳಲ್ಲಿ ಜನುಮ ಜನುಮದ ಜೋಡಿನೇ
ಆಗಿದ್ದೇವೆ.
ಅವಳು ನನ್ನ ಉಸಿರು.ನನ್ನ ಆತ್ಮ..ನನ್ನ ಜೋಡಿ.
ಆದ್ರೆ, ಈಗ ಅವಳಿಲ್ಲ. ನಾನು ಇನ್ನೂ ಇದ್ದೇನೆ.
-ರೇವನ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!