ಯಾರದೋ ನೆನಪು. ಇನ್ನಾರದೋ ಸೊಗಸು.

ಕಂಗಳ ನಿರೀಕ್ಷೆಯಲ್ಲಿ ಕಳೆದು ಹೋಗುವ ಮನಸ್ಸು

ಅವನ ಆಗಮನಕ್ಕೆ ಅಲಂಕಾರ ಮಾಡಿಕೊಂಡಾಗಿದೆ.

ಬರುವವನು ಯಾರು ಅಂತ ಹೇಳಬೇಕಿಲ್ಲ. ಅದು

ಹೃದಯಕ್ಕೆ ತಿಳಿದಿದೆ. ಕಂಗಳಲ್ಲಿ ಕನಸೂ ಮೂಡಿಯಾಗಿದೆ

ಅವನು ನನ್ನವನು. ಅವನು ನನ್ನವನು.

ಅವನಿಗಾಗಿ ಕಾಯುತ್ತಿರೋದು ಖುಷಿಯಿದೆ.

ಹೇಳಿದ ಮಾತು ಎಂದೂ ತಪ್ಪಿಲ್ಲ. ಬಂದೇ ಬರುವನು.

ಅಮ್ಮ ಕೂಗಿದರೂ ಕೇಳಲಿಲ್ಲ. ಆದ್ರೂ, ನಿಂತು

ಸುತ್ತು ಆಗಿಲ್ಲ. ಆ ದಿನಗಳಾದ್ರೂ ಪರವಾಗಿಲ್ಲ.

ಸುಂದರವಾಗೋ ಹಂಬಲ. ಅದಕ್ಕೇನೆ,

ತೋಳಿಲ್ಲದ ಹಸಿರು ರವಿಕೆ ಧರಿಸಿ ಕಾಯುತ್ತಿದ್ದೇನೆ.

ಕೆಂಗುಲಾಬಿ ಸೀರೆ ಉಟ್ಟುಕೊಂಡಿದ್ದೇನೆ. ಅಮ್ಮ

ಆಗಲ್ವೇ..ಹೀಗೆ ಅಂತ ಹೇಳಿ.ಹೇಳಿ ಉಡಿಸಿದ್ದಾಳೆ.

ಈ ಸಂಭ್ರಮ ಯಾಕೋ ಅಂತ ಚೇಡಿಸಿದ್ದು ಇದೆ.

ಅವನ ಬರುವಿಕೆಯಲ್ಲಿ ಕಾಯುತಿರೋದು ಅವನಿಗೂ

ತಿಳಿದಿದೆ. ಯಾಕೋ ಬಸ್ ತಡವಾಯಿತೋ ಏನೋ.

ಸಂಜೆ ಯಾತು. ಮಧ್ಯಾಹ್ನವೇ ಬರಬೇಕಿತ್ತು. 

ಇನ್ನೂ ಬಂದಿಲ್ಲ. ಅದೇ ನಿರೀಕ್ಷೆಯಲ್ಲಿ ಅವಳು ವಯಸ್ಸಾದರೂ

ಇನ್ನೂ ಕಾಯುತ್ತಿದ್ದಾಳೆ. ಅದೆಲ್ಲೋ. ಆದ್ರೆ, ಚಿತ್ರ ಕಲಾವಿದನ

ಕಲ್ಪನೆಯಲ್ಲಿ ಈಕೆ ಇನ್ನೂ ಸುಂದರ 16 ರ ಯುವತಿ..

 

-ರೇವನ್