• ‍ಅಕ್ಕಿ ತೊಳೆದು, ಅರ್ಧ ಗಂಟೆ ನೀರಿನಲ್ಲಿ ನೆನೆಯಲು ಇಡಿ 
  • ಕಾಯಿ ತುರಿದು, ರುಬ್ಬಿಕೊಂಡು, ಕಾಯಿ ಹಾಲು ತಯಾರಿಸಿ 
  • ಒಂದು ಪಾತ್ರೆಯಲ್ಲಿ (cooker ‍ಆದರೆ ಉತ್ತಮ), ಎಣ್ಣೆಹಾಕಿ ಒಲೆಯ ಮೇಲಿಡಿ
  • ಎಣ್ಣೆ ಕಾದ ಮೇಲೆ, ಸಾಸಿವೆ, ಕಡಲೆಬೇಳೆ, ಹಸಿರು ಮೆಣಸು, ಕರಿಬೇವು, ದ್ರಾಕ್ಷಿ, ಗೋಡಂಬಿ ಹಾಕಿ ಒಗ್ಗರಣೆ ಕೊಡಿ
  • ಇ‍ದಕ್ಕೆ ಕಾಯಿ ಹಾಲು, ಅಕ್ಕಿ ಹಾಕಿ, ಅಕ್ಕಿ ಬೇಯಲು ಬಿಡಿ 

ಬಿಸಿ ಬಿಸಿ ಕೊಕನಟ್ ರೈಸಿ ರೆಡಿ. 

ಕಾಯಿ ಹಾಲಿನಲ್ಲೇ ಬೆಂದ ಅಕ್ಕಿ, ರುಚಿಯಾಗಿರುತ್ತದೆ. ‍

ನಿಮ್ಮ ಗಮದಲ್ಲಿರಲಿ: 

೧ ಕಪ್ ಅಕ್ಕಿಗೆ, ೨ ಕಪ್ ಕಾಯಿ ಹಾಲು ಸಾಕು. ಆದರೆ ಕೆಲವು ವೇಳೆ, ಕೆಲವು ವಿಧದ ಅಕ್ಕಿ ಬೇಯಲು ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿ ಕಾಯಿ ಹಾಲು ಬೇಕಾಗಬಹುದು. ಅದಕ್ಕೆ, ಮೊದಲೆ ೧/೨ ಕಪ್ ಜಾಸ್ತಿ ಕಾಯಿ ಹಾಲು ತಯಾರಿಸಿಡುವುದು ಉತ್ತಮ. 

Cooker ‍ನಲ್ಲಿ ೨-೩ ಕೂಗು ಬರಿಸಿಯೂ ತಯಾರಿಸಬಹುದು. ಆದರೆ ಅದರ ರುಚಿ ಸ್ವಲ್ಪ different ‍ಆಗಿರುತ್ತದೆ. 

ಮೇಲಿನ ರೀತಿಯಲ್ಲಿ ತಯಾರಿಸುವುದಾದರೆ, ಅಕ್ಕಿ ಬೇಯಲು ಒಲೆಯ ಮೇಲೆ ಇರುವಾಗ, ತಳ ಹಿಡಿಯದಂತೆ ನೋಡಿಕೊಳ್ಳಿ.