ನೀ ಪಲ್ಲವಿಸಿದ ಸಾಲುಗಳು
ಹಾಡಾಗುವ ಮುನ್ನ,
ಪಕ್ಕವಾದ್ಯಗಳು 
ತಾಳ ತಪ್ಪಿದವಲ್ಲ ಗೆಳತಿ????
ಮಾತಿನ ಮಹಲು
ಮುರಿದು ಬಿದ್ದು
ಸುತ್ತುವರಿದಿದ್ದು ಮೌನದ ಅಸಮ್ಮತಿ....

ನಾನು ಅ೦ದಿನ ಸ೦ಭಾವಿತ.
ನೀನು ಆಕರ್ಷಣೆಗಳ ಸ೦ಗಾತಿ.
ಇನ್ನಷ್ಟು ಭ್ರಾ೦ತಿಗಳು
ಬೆಸೆಯಲಿ...
ಅಷ್ಟರೊಳಗೆ ಇನ್ನೊ೦ದು 
ಪೆಗ್ಗು ಮುಗಿಸಿ ಬರುವೆ...
ಏನ೦ತಿ????

-ಸಾತ್ವಿಕ್ ಹ೦ದೆ