ಕಟ್ಟಿಕೊಡು ಈ ನನ್ನ ಪುಟ್ಟ ಕನಸ,
ಬಿಟ್ಟು ಕೊಡು ಆ ನನ್ನ ದಿಟ್ಟ ಮನಸ,
ಹುಟ್ಟಿದೆ ನಿನಗಾಗಿ ಮರು ಹುಟ್ಟು...
ಎಲ್ಲ ಭಾವ ಬಾಂಧವ್ಯ ಬಿಟ್ಟುಕೊಟ್ಟು
ಸಾಲದೇ ಈ ಮುಗ್ಧ ಮನಸು ನಿನಗೆ?
ಕನಸಿದೆ ಏಕೆ ಬರಿಯ ವಸ್ತು ಸುಖಕೆ?
ಕರಗಿತೆ ಸಮಯದಲಿ ನಿನ್ನ ಬಣ್ಣ...
ಯಾರು ಕದ್ದರು ಸ್ನಿಗ್ಧ ನೀಲಿ ಕಣ್ಣ....
ಒಪ್ಪದೇ ಕಡಿದೆ ಮಾರಿ ಮುನಿಸು,
ತೋರದೆ ದಾರಿ, ಮಾಡಿದೆ ಮನಸು...
ಕೊಡುಗೆ ಕೇಳಿದೆ ವಿರಹ ತಾಪ,
ತಪ್ಪಾಯಿತೇ ಸೌಂದರ್ಯ ಪಾಪ...?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!