ಇಲ್ಲ ಪ್ರಪಂಚ ಮುಳುಗಲೇ ಇಲ್ಲ|
ಸೂರ್ಯ ಎಂದಿನಂತೆ ಬೆಳಕು ಕೊಟ್ಟ|
ಗಾಳಿ ಬೀಸುತ್ತಲೇ ಇತ್ತು|
ಎಲ್ಲಾ ಮಾಮಾಲಂತಿತ್ತು|
ನೀನ್ಯಾಕೆ ಹೀಗಿದ್ದೀಯಾ ಅಂತಾ ಯಾರೂ ಕೇಳಲಿಲ್ಲ|
ಯಾವ ಫೋನ್ ಕರೆಯೂ ಬರಲಿಲ್ಲ|
ಯಾರೂ ಹುಡುಕಿಕೊಂಡೂ ಬರಲಿಲ್ಲ|
ಮಾತನಾಡಿಸುವವರೇ ಇಲ್ಲ|
ಅಂತೂ ಇಂತೂ ಎರಡುದಿನ ನಿನ್ನಬಿಟ್ಟಿರುವುದಕ್ಕೆ ನನಗಾಗಲೇ ಇಲ್ಲ|
ಕದ್ದು ಕದ್ದು ನೋಡುತ್ತಿದ್ದೆ ನನ್ನ ಬಗ್ಗೆ ಯಾರಾದರೂ ಎರಡಕ್ಷರ ಬರೆದಿದ್ದಾರಾ? ಎಂದು|
ಇಲ್ಲ, ಇಲ್ಲವೇ ಇಲ್ಲ |
ಬರೆದಿದ್ದಕ್ಕೆ ಲೈಕ್ ಹಾಕೋ ಜನ
ಬರೆಯದಿದ್ದಾಗ ನನಗಾಗಿ ಪರಿತಪಿಸುತ್ತಾರೆಂಬ ನನ್ನ ನಿರೀಕ್ಷೆಯನ್ನು ಸುಳ್ಳುಮಾಡಿದ್ದರು!!!
ಪ್ರತಿಕ್ರಿಯೆ (6)
================= ಮೋಟು ಬೀಡಿಗಳೆ ಹಾಗೆ
'ಉಫ್ ಉಫ್ ' ಅನ್ನುತ್ತಿರುವಷ್ಟು ಕಾಲ
ಬೆಂಕಿ ಬೂದಿ ಎಲ್ಲ
ಕ್ಷಣ ಕಾಲ ಪಕ್ಕಕ್ಕೆ ಎತ್ತಿಟ್ಟರೂ
ಕಿಡಿಯೂ ಇಲ್ಲ ಹೊಗೆಯೂ ಇಲ್ಲ
ಎಲ್ಲವೂ ಶೂನ್ಯ ಕ್ರಿಯೆಗೆ ಒಂದು ಪ್ರತಿಕ್ರಿಯೆ
ಪ್ರತಿಕ್ರಿಯೆಗೆ ಮತ್ತೆ ಕ್ರಿಯೆಯ ಸರಣಿ
ಮುಖಹೊತ್ತಿಗೆಯ ನೋಟಿಫಿಕೇಶನ್
ಮಿಣ ಮಿಣ
ಜ್ವರಮಾಪಕ ಬಾಯಲ್ಲಿಟ್ಟು
ಕಾಲು ಕೈಗಳನ್ನು ಹೊದಿಕೆಯೊಳಗಿಟ್ಟು
ಮುದುರಿ ಮಲಗಿದರೆ
ಎಲ್ಲವೂ ಶೂನ್ಯ ಮತ್ತೊಮೆ ಕಡ್ಡಿಗೀರಬೇಕು
ಬೆಂಕಿ ಹಚ್ಚಬೇಕು
ಹೊಗೆಯ ಸುಖ ಸವಿಯಬೇಕು
"ಸಿಗರೇಟ್ ಅಂದರೆ ಒಮ್ಮೆ ಹಚ್ಚಿದರೆ ಆಯ್ತು, ಮುಗಿಯುವವರೆಗು ಸೇದಬಹುದು,
ಈ ಬೀಡಿ ಹಂಗಲ ಕಣೊ ಚಿನ್ನ, ಉಫ್ ಉಫ್ ಅಂತ ಉರುವತ್ತಲೆ ಇರಬೇಕು, ಮರೆತರೆ ಆರಿ ಹೋಗಿಬಿಡುತ್ತೆ" .
ಈ ಫೇಸ್ ಬುಕ್ ಸಂಬಂದ ಸಹ ಒಂದು ರೀತಿ ಬೀಡಿಯ ರೀತಿ ಉಫ್ ಉಫ್ ಅನ್ನುತ್ತ ’ಲೈಕ್ ’ ಕುಟ್ಟುತಲೆ ಇರಬೇಕು, ಅದನ್ನು ಬಿಟ್ಟರೆ ಫೇಸ್ ಬುಕ್ ಪಾಲಿಗೆ ನಾವು ಜೀವಂತವಿರಲ್ಲ. ವಾರಗಟ್ಟಲೆ ’ಲೈಕ್ ’ ಕುಟ್ಟುವುದು ಬಿಟ್ಟರೆ ಆಮೇಲೆ , ನಮ್ಮ ’ಸ್ಟೇಟಸ್ ಅಪ್ ಡೇಟ್ ’ ಗೆ ಯಾವ ಬೆಲೆಯು ಇರಲ್ಲ