ತೆಗೆದಿಡು ಗೆಳತಿ ನಿನ್ನೆದೆಯ ಬಾಗಿಲನು
ಹಣ ಉಂಟು ! ಗುಣ ಉಂಟು! ನನ್ನಲ್ಲಿ
ನಾ ಒಳ ಬರಲು ನೋವೆಕೆ ನಿನ್ನಲ್ಲಿ
ಮೊದಲೊಮ್ಮೆ ಬರಲೆಂದುಕೊಂಡೆ
ಮಗದೊಮ್ಮೆ ಬಾರನೆಂದುಕೊಂಡೆ,
ಅರಿವಾಯಿತೆನಗೆ
ನಿನ್ನ ಅಂತರಾಳದ ನೊವು
ನೀ ತೆರೆದದ್ದು ಹೋರಹಾಕಲೆಂದು
ನಿನ್ನವನ ಹೋರಹಾಕಲೆಂದು
ಅತ್ತರೆ ಕಣ್ಣೀರಲ್ಲೊಗುವ
ನೊಂದರೆ ಮೌನದಲ್ಲೊಗುವ
ಹೊರಹಾಕಲೇಕಂಜಿಕೆ ?
ಪ್ರೀತಿಯೆಂದುಸಿಯನಾಡುವವನ
ಅವನಿತ್ತ ಪ್ರೀತಿ ಅವನಿಂದಲೇ ಮಣ್ಣಾಗಿದೆ
ನಾನಿತ್ತ ಪ್ರೀತಿ ನಿನ್ನಿಂದಲೇ ಚಿಗುರಬೇಕಿದೆ
ಬಾ ಮದುವಣಗಿತ್ತಿಯಾಗಿ
ನಮ್ಮಿಬ್ಬರ ಜೀವನಕ್ಕೊಂದು ಜೀವ ಕೊಡೋಣ
ಹೊಸ ಜೀವಕ್ಕೊಂದು ಜನ್ಮ ಕೊಡೋಣ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!