ಹಚ್ಚ ಹಸಿರ,ಪಚ್ಚ ಪೈರ
ಸ್ವಚ್ಚ ಗಾಳಿಯನುಚ್ವಾಸಿಸುತ
ಕಂಚಿನಂಥ ಕಂಠದಿಂದ
ರೋಷವನು ಹೆಚ್ಚಿಸುವ
ಮುಚ್ಚು~ಮರೆ,ಪೆಚ್ಚು ಮೋರೆ
ಕಿಂಚಿಂತೂ ಮೆಚ್ಚದವನು.
ಮಿಂಚನ್ನೇ ನಾಚಿಸುವ
ಕೆಚ್ಚೆದೆಯ ಕಿಚ್ಚಿವನು.
ಶತ್ರುವನೂ ಮೆಚ್ಚಿಸುವ
ಮಚ್ಚಿನಂಚಿನಂತೆ ಮೊನಚಿವನು.
ಯಾರಿವನು?
ಹಿಮಾಲಯದಂಚಿನಲಿ
ದೇಶಭಕ್ತಿಯ ಹುಚ್ಚಿನಿಂದ
ಕಿಚ್ಚನಂದಿಸೋ ಮಂಜಿನಲೂ
ಸಂಚು ಮಾಡಿ,ಹೊಂಚು ಹಾಕಿ
ಮೇಲೇರುವವನನು ಕೊಚುತ್ತಾ
ಬೆಚ್ಚನೆಯ ರಕ್ತವನು
ಚುಚ್ಚಿರಿದು ಚಿಮ್ಮಿಸುತಿರುವವನು.
ಅವನೇ ನಮ್ಮ ವೀರ ಯೋಧನು.ರಾಷ್ಟ್ರ ರಕ್ಷಕನು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!