ಸ್ವಾನುರಕ್ತಿಯ ವಿಲಾಸಕೆ

ಸ೦ಧ್ಯೆಗೂ, ಸವಿತೆಗೂ

ಸ್ಪ೦ದನೆಗಳೇ ಇಲ್ಲದ ಸಹಿಷ್ಣುತೆ.

ಆಗಾಗ ಅಕಾಲಿಕ ವಿರಕ್ತಿ

ಬೆಸೆಯದ ಬ೦ಧಗಳ 

ಅನುಕೂಲಕ್ಕೊ೦ದು ಅಭಿವ್ಯಕ್ತಿ...

ಅಸಮ್ಮತಿಗಳ ಆಸ್ವಾದಿಸಿದ

ಅಪ್ರಾಮಾಣಿಕ ತಿರಸ್ಕಾರ,

ವೈರುಧ್ಯಗಳ ನಡುವೆ

ಬಾ೦ಧವ್ಯಗಳ ಅನಾಚಾರ.

ಇಲ್ಲಿ ಎಲ್ಲರೂ ಅಪರಿಚಿತರೇ

ಒಲ್ಲದ ಅಣ್ಣನಿಗದ್ಯಾರೋ ಅತ್ತಿಗೆ,

ಇನ್ಯಾರೋ ಚಿಕ್ಕಪ್ಪ... ಮಾವ....

ಅ೦ತೂ ಬಾವಿಯೊಳಗೇ

ಜಗತ್ತನ್ನಿಳಿಸಿದ ಗ್ಲೋಬಲ್ ಮಾನವ.

ಹುಡುಗಾಟಿಕೆಯ ದಿನಗಳಲ್ಲಿ

ಸುತ್ತುವರಿದಿದ್ದು ,

ಕನಸುಗಳಿಗೂ ಪರ್ಮಿಟ್ ಇಲ್ಲದ

ಕಾನ್ವೆ೦ಟ್ ಕೋಟೆ.

ಅಲ್ಲೆಲ್ಲಾ ಕುಟು೦ಬ.... ಕನ್ನಡ

ಇವುಗಳು 

ಸಲ್ಲದ ಸ್ವದೇಶಿ ಸ್ವಗತಗಳು.

ಜಾಗತಿಕ ಜಾಣತನಕ್ಕೆ ಜಾಲ

ನಿರ್ಮಾಣವಾದದ್ದೇ ಇಲ್ಲಿ.

ಪೂರ್ವದ ಸೂರ್ಯ ಜನಿಸಿಯಾನೇ

ಪಶ್ಚಿಮದಲ್ಲಿ?????

-ಸಾತ್ವಿಕ್ ಹ೦ದೆ