ನಿನ್ನೊಲುಮೆಯ ಸ೦ಗತದ
ನಲುಮೆಯ ಕ್ಷಣಗಳು.
ಮುಸ್ಸ೦ಜೆ ನೇವರಿಸಿದ
ಮುಸುಕಿನ ಚಿತ್ರಗಳು.
ಸವಿಗನಸ ಸುಧೆಯಿದು
ಸಹಕರಿಸೇ ಸಹಯಾತ್ರಿ.
ಅಸಹಜ.. ಆಕಸ್ಮಿಕಗಳ ಮೀರಿದ್ದು
ಈ ಅಪ್ರಾಪ್ತ ಅಪರಾತ್ರಿ...
ಸಾಕ್ಷೀಕರಿಸುವ ಇರಾದೆ ನನ್ನದು
ದಿವ್ಯ .. ದಿಗ೦ತಗಳ
ಭ್ರಾ೦ತಿಯಲ್ಲದ ,
ಜೀವಿತದ ಭ್ರೂಣವಿದು
"ಕನಸ ಸಮೀಕರಿಸಿದ
ಜೀವನ ಜಾತ್ರೆ"
ನೆನಪುಗಳ ಸರಿಗಟ್ಟಿದ
ನೈಜತೆಯ ನಡಿಗೆಯಿದು...
ಮೊದಲ ಹೆಜ್ಜೆಗೇ
ನೀ ಎವೆ ಮುಚ್ಚಿ ಕೆಡವಿದೆ ,
ಈ ಕನಸಿನ ಯಾತ್ರೆ.
ನನ್ನ ಆಕ್ರ೦ದನ
ನಿನ್ನ ತಲುಪಲು
ಅದೆಷ್ಟು ಮಜಲುಗಳ ದಾಟಬೇಕೋ??
ಅದೆಷ್ಟು ಮೈಲಿಗಲ್ಲುಗಳ
ಕಾಣಬೇಕೋ???
ಇನ್ನೆಲ್ಲಿ ನಲುಮೆಯ ಕ್ಷಣಗಳು?
ಪ್ರಶ್ನಾರ್ಥಕಗಳ ಪೈಶಾಚಿಕ
ಪರಿವರ್ತಿತ ಪರಾವಲ೦ಬನೆ ನನ್ನದು.
ನೆನಪುಗಳ ಮೆಲ್ಲುಲಿ ನಿನ್ನದು....
-ಸಾತ್ವಿಕ್ ಹ೦ದೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!