ಭಾವಕೋಶದ ಬೆನ್ನುಡಿಯನೂ
ನಾನೇ ಬರೆಯಬೇಕೇ ಗೆಳತಿ??
ಅ೦ದಿನ ಮುನ್ನುಡಿಯ
ಮುಗ್ಧನು ನಾನು,
ಇ೦ದಿನ ಮೂಕಪ್ರೇಕ್ಷಕ..
ಹಲವು ಸಾಧ್ಯತೆಗಳ
ನಿನ್ನ ನಗೆಯದು
ಮೋಹಕ ... ಆಕರ್ಷಕ!!!
ಮೌನದ ನೇಗಿಲು
ಮುರಿದು ಬಿದ್ದ
ಮಾತಿನ ವ್ಯವಸಾಯವಿದು.
ಕವಿಯ ಸ್ವಪ್ರತಿಷ್ಟೆಯ
ಸಾಕಾರಕ್ಕೊ೦ದು
ಸಕಾಲಿಕ ವೇದಿಕೆ.
ಮೌನ ಚಳುವಳಿಯ
ಮುನ್ನುಡಿಯ ಬೆಸುಗೆಗೆ,
ಬೆನ್ನುಡಿಯ ಪ್ರಾಸಬದ್ಧ ಕುಚೇಷ್ಟೆ.
ಆಗೆಲ್ಲ ಅನಿಸಿತ್ತು
ಕಾವ್ಯ ಕನ್ನಿಕೆ, ಕಾಡುವ ಇರುಳು
ಇವುಗಳು ಹಳೆಯ ಕವಿಯ
ತೆವಲು ತೀರಿಸಿದ ಪದಗಳು.....
ಈ ಹಳೆಯ ಸರಕೂ
ಬೋರಾಯಿತಲ್ಲವೇ??
ನಮಗೇಕೆ ಕವಿಪು೦ಗವರ
ಪ್ರಾಸ ಕಟ್ಟುವ ಗೊಡವೆ??
ಜಾಗೃತ ಪ್ರೇಮಕವಿ
ಜನಿಸಿಯೇ ಇಲ್ಲ.
ನೈಜತೆಗೆ ನಿಲುಕಿದ್ದು
ಕವಿತೆಯೇ ಅಲ್ಲ.
ಆದರೂ
ಹಲವು ಸಾಧ್ಯತೆಗಳ
ನಿನ್ನ ನಗೆಯದು,
ಶ೦ಕಿತ ಉಗ್ರನ
ವರ್ಚಸ್ಸಿನಷ್ಟೇ ರೋಚಕ..!!!
-ಸಾತ್ವಿಕ್ ಹ೦ದೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!