ಕೆಲವೊಮ್ಮೆ ಯಾವುದೋ ಒಂದು ನೆನಪು ಥಟಕ್ಕನೆ ಮನಸ್ಸಿಗೆ ಬಂದು ಈಗ ಅಷ್ಟೇನೂ relevant ಅಲ್ಲದಿದ್ದರೂ ಕಸಿವಿಸಿ ಉಂಟು ಮಾಡುತ್ತದೆ.
ಈ ರೀತಿಯೇ ಇತ್ತೀಚೆಗೊಮ್ಮೆ ಕನ್ನಡದಲ್ಲಿ ಏನೋ ಟೈಪ್ ಮಾಡಿಟ್ಟುಕೊಳ್ಳುತ್ತಿರುವಾಗ ನಮ್ಮ ಕನ್ನಡ ಮೇಷ್ಟ್ರು ಶಾಲೆಯಲ್ಲಿ “ಬರವಣಿಗೆ ಚೆಂದವಾಗಿರಲಿ” ಎಂದು ಜೋರು ಮಾಡಿ ಹೇಳುತ್ತಿದ್ದುದು ಥಟಕ್ಕನೆ ನೆನಪಾಗಿ ಒಮ್ಮೆ ಕಸಿವಿಸಿಯಾಯಿತು. ಏಕೆಂದರೆ ಆ ದಿನ ಅದ್ಯಾವುದೋ ವಿಚಿತ್ರ ಫಾಂಟ್ ಬಳಸಿ ಟೈಪ್ ಮಾಡಿಟ್ಟುಕೊಳ್ಳುತ್ತಿದ್ದೆ. ಅಕ್ಷರ ದುಂಡಗೆ ಮೂಡುವುದಿರಲಿ, ಟೈಪ್ ಮಾಡಿಟ್ಟುಕೊಂಡದ್ದನ್ನು ಓದಲು ನನಗೇ ಕಷ್ಟವಾಗುತ್ತಿತ್ತು. ಆದರೆ ಈ ಬಾರಿ ಬರವಣಿಗೆ ಚೆಂದಪಡಿಸಲು ಮತ್ತೊಮ್ಮೆ ಬರೆದಿಡುವುದು ಬೇಕಾಗಲಿಲ್ಲ - ಟೈಪ್ ಮಾಡಿಟ್ಟುಕೊಂಡದ್ದರ ಫಾಂಟ್ ಬದಲಾಯಿಸಿದೆ!
ಈಗ್ಗೆ ಕೆಲವು ವರ್ಷಗಳ ಹಿಂದೆ ಕೆಲಸದ ದೆಸೆಯಿಂದ ಮ್ಯಾಕ್ ಕಂಪ್ಯೂಟರು ಬಳಸಲೇಬೇಕಾಗಿ ಬಂದಾಗ ಅದರಲ್ಲಿ ಕನ್ನಡದಲ್ಲಿ ಟೈಪ್ ಮಾಡಲು ಸ್ವಲ್ಪ ಸರ್ಕಸ್ ಮಾಡುವಂತಾಗಿತ್ತು. ಇತ್ತೀಚೆಗೆ ___LINK_OPEN_href="https://github.com/ratreya/Lipika_IME/wiki"___ಲಿಪಿಕಾ ಎಂಬ ತಂತ್ರಾಂಶದಿಂದಾಗಿ ಮ್ಯಾಕ್ ಕಂಪ್ಯೂಟರಿನಲ್ಲಿ ಟೈಪ್ ಮಾಡುವುದು ಅಷ್ಟೇನೂ ಕಷ್ಟವಿಲ್ಲ. ಅಲ್ಲದೆ ಮ್ಯಾಕ್ ಬಳಸಿ ಟೈಪ್ ಮಾಡುವಾಗ “ಆಹಾ, ಅಕ್ಷರಗಳು ಎಷ್ಟು ಚೆಂದ ಮೂಡಿಬರುತ್ತಿವೆ!” ಎಂದೆನಿಸದೇ ಇರದು. ಏಕೆಂದರೆ ಮ್ಯಾಕ್ ಕಂಪ್ಯೂಟರಿನಲ್ಲಿ ಅಕ್ಷರಗಳನ್ನು ರೆಂಡರ್ ಮಾಡುವ ರೀತಿ ಅದ್ಭುತವಾಗಿದೆ. ಇತ್ತೀಚೆಗಷ್ಟೆ ಅಮೇರಿಕದಿಂದ ಹಿಂದಿರುಗಿದ ಗೆಳೆಯರೊಬ್ಬರು ಸದಾಕಾಲ ಮ್ಯಾಕ್ ಬಳಸುವ ಆಪಲ್ ಅಭಿಮಾನಿ. ಅವರು ಕಳೆದ ಸಲ ನಮ್ಮ ಆಫೀಸಿಗೆ ಭೇಟಿ ಕೊಟ್ಟಾಗ ಮ್ಯಾಕ್ ಕಂಪ್ಯೂಟರಿನಲ್ಲಿ ಮೂಡಿಬರುವ ಕನ್ನಡ ಅಕ್ಷರಗಳನ್ನು ನೋಡಿ “ಇದೆಲ್ಲ ಸ್ಟೀವ್ ಜಾಬ್ಸ್ ಕೃಪೆ ಸಾರ್” ಎಂದೇ ಉದ್ಗರಿಸಿದ್ದರು! ಸ್ಟೀವ್ ಜಾಬ್ಸ್ ವಿಶ್ವವಿದ್ಯಾಲಯದಲ್ಲಿ ಸುಮ್ಮನೆ ಆಸಕ್ತಿಯಿಂದ ॑ಟೈಪೋಗ್ರಫಿ॑ ತರಗತಿಗಳಿಗೆ ಹಾಜರಾಗುತ್ತಿದ್ದರಂತೆ. ಇದರ ಫಲ ಮ್ಯಾಕ್ ಬಳಕೆದಾರರಿಗೆ ಸಿಗುತ್ತಿದೆಯೆಂದೇ ಅವರ ಅಭಿಪ್ರಾಯ.
ಹೀಗಿದ್ದರೂ ಆಪಲ್ ಒದಗಿಸುವ ಕನ್ನಡ ಫಾಂಟಿನಲ್ಲಿ ಕೆಲವೊಂದು ಚಿಕ್ಕಪುಟ್ಟ ತೊಂದರೆಗಳಿವೆ.
ಈ ಪುಟ್ಟ ಬರಹ ಕೂಡ ಮ್ಯಾಕ್ ಕಂಪ್ಯೂಟರೊಂದರಲ್ಲಿ ॑ಸಿಂಪಲ್ ನೋಟ್॑ ಎಂಬ ತಂತ್ರಾಂಶ ಬಳಸಿ ಟೈಪ್ ಮಾಡಿದ್ದು.
ಚಿತ್ರ ಕೃಪೆ: ಕಾಮತ್ ಡಾಟ್ ಕಾಮ್
ಪ್ರತಿಕ್ರಿಯೆ (1)
ಸಂಪದದ ಅಪ್ಲಿಕೇಶನ್ ಹೊಸ ಆವೃತ್ತಿ ಟೆಸ್ಟ್ ಮಾಡಲು ಸಹಾಯ ಬೇಕಿದೆ. ನಿಮಗೆ ಸಾಧ್ಯವಾದರೆ ಟೆಸ್ಟ್ ಮಾಡಲು ಸಹಾಯ ಮಾಡುತ್ತೀರಾ?
ಅಪ್ಲಿಕೇಶನ್ ಟೆಸ್ಟ್ ಮಾಡುವುದರಲ್ಲಿ ಪಾಲ್ಗೊಳ್ಳಲು hpn AT saaranga Dot com - ಈ ವಿಳಾಸಕ್ಕೆ ನನಗೊಂದು ಇ-ಮೇಯ್ಲ್ ಕಳುಹಿಸಿ.
ನಾಗೇಶ ಮೈಸೂರು