ಮಹಾಚೇತನ ಮಹಾಚೇತನ
ಈ ದೇಶಕೆ ನೀವು ಮಾದರಿ ಮಹಾಚೇತನ
ಶೋಷಿತ ಸಮುದಾಯಕೆ ನೀವು ದಿವ್ಯ ಚೇತನ
ಭೀಮ ನಿಮ್ಮ ಹೋರಾಟ ನವ ಚೇತನ
ನಿಮಗೆ ನಮ್ಮ ನಮನ
ಎಲ್ಲಿ ಅಡಗಿತ್ತು ತಂದೆ ನಿಮ್ಮ ಕೆಚ್ಚೆದೆಯ ಕ್ರಾಂತಿ
ಅದರ ಪಲವಾಗಿ ನಮಗೆ ಬದುಕಲ್ಲಿ ತಂದಿರಿ ಶಾಂತಿ
ಯಾರಿಗು ಸೋಲದಂತ ಸ್ವಾಭಿಮಾನ ನಿಮ್ಮದು
ಯಾರಿಗು ನಿಲುಕದಂತ ಜ್ಞಾನ ನಿಮ್ಮದು
ಭೀಮ ನಮ್ಮ ಬದುಕಲ್ಲಿ ನೀವೆ ಲಾಂಛನ
ನಿಮಗೆ ನಮ್ಮ ನಮನ
ನಮ್ಮ ಬಾಳಿಗೆ ನೀವು ಭಾಗ್ಯದಾತರು
ನಿಮ್ಮನು ಪಡೆದ ನಾವು ಪುಣ್ಯವಂತರು
ಬೆಳಕೆ ಇರದ ನಮಗೆ ಹೊಸ ಬೆಳಕ ತಂದರು
ಬರಿದಾದ ಈ ಜನ್ಮಕೆ ಮರುಜನ್ಮ ತಂದರು
ಭೀಮ ನಿಮ್ಮ ಆದರ್ಶ ನವ ಸಿಂಚನ
ನಿಮಗೆ ನಮ್ಮ ನಮನ
ನಿಮ್ಮ ತತ್ವವು ನಮಗೆ ಸ್ಪೂರ್ತಿ ನೀಡಿದೆ
ನಿಮ್ಮ ಬರಹವು ನಮಗೆ ಶಕ್ತಿ ತಂದಿದೆ
ನಮ್ಮ ಕಣ್ಣ ಹನಿಗಳ ವರಸಿದ ತಂದೆ ನೀವು
ಕಲ್ಪನೆಗೂ ಮೀರಿದ ಈ ರಾಷ್ಟ್ರದ ತಂದೆ ನೀವು
ಭೀಮ ನಿಮ್ಮ ಚಿಂತನೆ ಪಥ ಸಂಚಲನ
ನಿಮಗೆ ನಮ್ಮ ನಮನ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!