ಸುಕೀರ್ತಿ ಮಂದಿರದ ಚಿನ್ನದ ಕಳಸ    - ಲಕ್ಷ್ಮೀಕಾಂತ ಇಟ್ನಾಳ

ಅರಮನೆಯ ವಾಸ

ಬಡಜನರ ಸಹವಾಸ

ಸುಕೀರ್ತಿ ಮಂದಿರದ ಮರೆಯಾದ ಕಳಸ

ಕಾವೇರಿಯ ಹನಿಹನಿಯಲಿ ಕಂಬನಿಯ ವಿಳಾಸ

ಸುಖ ಸುಪ್ಪತ್ತಿಗೆಯ ಭರತ

ಕಷ್ಟ ಕಾರ್ಪಣ್ಯಗಳಿಗೆ ಮಿಡಿತ

ದೀನ ದೈನ್ಯರ ಕಣ್ಣೀರ ಅರಿತ

ಕರುಣೆದುಂಬಿದ ಮಾನವಂತ ಮಹಾಂತ

ಲಕ್ಷ ಲಕ್ಷ ಜನಮನಗಳ ಒಡೆಯ

ಸಾಮಾನ್ಯರ ಅಭಿಮಾನಿ ಹೃದಯ

ಗಣಮಾನ್ಯ ಸಿಂಧು ಮೈಸೂರ ಬಂಧು

ನಿಮಗಿದೋ ವಂದನೆ,  ಇದೋ, ನಿಮಗೆ ವಂದನೆ