ಸರಳ ಜೀವನ..ಸರಳ ಪಯಣ...

ಜೀವನದ ಉದ್ದಕ್ಕೂ ಶೃತಿ ಕೆಡದ

ದಾಂಪತ್ಯ ಗಾಯನ...

ಪಲ್ಲವಿ ಇದೆ. ಚರಣ ಇನ್ನೂ ಸುಂದರ.

ಹಾಡುವ ಕೋಗಿಲೆ ಹೊಸದೊಂದು

ಪದವ ಬೇಡುತ್ತಿದೆ.

ಚರಣದಲ್ಲಿ ಆ ಸೊಗಸಿದೆ. ಪಲ್ಲವಿಯಲ್ಲಿ

ಪ್ರೀತಿಯ ಸೆಳೆತವೂ ಇದೆ.

ಹಾಡುವ ಕೋಗಿಲೆಗೆ ಇನ್ನೇನೂ ಬೇಕು..?

ಎಂದು ಪ್ರಶ್ನಿಸುವ ಕವಿಗೆ ಈಗ ಏನೂ

ಹೊಳೆಯುತ್ತಿಲ್ಲ.

ಸರಳ ಜೀವನ ಆ ಕವಿಯದ್ದು. ಸುಂದರ

ಗೆಳತಿನೇ ಆತನ ಸ್ಪೂರ್ತಿ.

ಕೋಗಿಲೆ ಕೇಳುವ ಆ ಹೊಸ ಪದ

ಯಾವುದೆಂಬ ಪ್ರಶ್ನೆ ಇನ್ನೂ ಹಾಗೆ ಇದೆ.

-ರೇವನ್