ಏನು ಹೇಳಲಿ ಆ ಮೈ ಜುಮ್ ಎನ್ನಿಸುವ ಉಯಲಯ ಆಟಕ್ಕೆ ,

ಹೇಗೆ ವರ್ಣಿಸಲಿ ನಾಯಿ ಗಳ ರಿಂಗ್ ಶೋ ನ  ,

ಏನೆಂದು ಹೊಗಳಲಿ ಆನೆಯ ಚೆಂಡು ಆಟಕ್ಕೆ ,

ಹೇಗೆ ವ್ಯಕ್ತ ಪಡಿಸಲಿ ಜೋಕರ್ ಗಳ ತುಂಟು ಆಟವ,

ಹೆಂಗೆ ಬಣಿಸಲಿ  ನೃತ್ಯಗಾರ್ತಿಯ ಮೋಹಕ ನೃತ್ಯವ ,

ಹೇಗೆ ವಿವರಿಸಲಿ ಎದೆ ನಡುಗಿಸುವ ಮೋಟಾರ್ ಬೈಕ್ ಸಾಹಸವ ,

ಏನೆಂದು ಕಲ್ಪಿಸಲಿ ದಿಗ್ ಭ್ರಮೆ ಹುಟ್ಟಿಸಿದ ಮೆಜಿಕ್ ಗೆ ,

ಸರ್ಕಸ್ ಒಂದು ಟೀಂ ವರ್ಕ್ ಅಂತ ಹೇಳಲೇ ,

ಇಲ್ಲ ಅದು ಸಾಹಸ ಕ್ರೀಡೆ ಅಂತ ಹೇಳಲೇ,

ಇಲ್ಲ ಅದು ಮನುಷ್ಯ ಪ್ರಾಣಿಗಳ ಸಂಘಟನೆ ಅಂತ ಹೇಳಲೇ,

ಏನೆಂದು ಹೇಳಲಿ ಅಲ್ಲಿನ ಕಲೆಗಾರರ ಬಗೆ ,

ಹುಟ್ಟು ಸಾವು ಎಲ್ಲವು ಇಲ್ಲೇ ಅನ್ನೋ ಅವರ ನೋವಿಗೆ ಏನು ಹೇಳಲಿ ,

ಮೈ ಕೈ ಮುರಿದರೆ ಯಾವ ಇನ್ಸೂರೆನ್ಸ್ ಇಲ್ಲದ ಅವರ ಅಸ್ಥಿರತೆ ಗೆ ಏನು ಹೇಳಲಿ ,

ಹೊಟ್ಟೆ ಪಾಡಿಗೆ ಪ್ರಾಣವನೆ ಪಣಕ್ಕೆ ಇಟ್ಟು ಹೊರಡುವ ಅವರ ಆತ್ಮ ವಿಶ್ವಾಸಕ್ಕೆ ,

ಒಟ್ಟಾರೆ ಸರ್ಕಸ್ ಒಂದು ಬಿನ್ನ ಲೋಕ ,

                                                 ಬರೆದ ಬಡಪಾಯಿ ,

                                                                        ಹರೀಶ್  ಎಸ್ ಕೆ