ನಮ್ಮೂರು ಬೆಂಗಳೂರು

ಬೆಂದಕಾಳೂರು ಕೆಂಪೇಗೌಡನ ಕಾಲ

ನವ ಬೆಂಗಳೂರಿಗೆ ನಾವೆಲ್ಲ ದಾಳ

ದಾಳ ಉರುಳುವುದುಂಟು

ಕೆರಳಿ ಏಳುವುದುಂಟು

ಎದ್ದವನು ಭೂಪ, ಬಿದ್ದವನು ಬೆಪ್ಪ

ಇದು ಊರಲ್ಲವೋ ಗೆಳೆಯ

ಸರಿಯಾಗಿ ಕಣ್ಣು ತೆರೆದು ನೋಡು

ಆಶ್ಚರ್ಯ ಬೇಡ ಇದೊಂದು ರಣಭೂಮಿ!

ಪ್ರತಿಯೊಬ್ಬನೂ ಶಿರಸ್ತ್ರಾಣದ ಸೈನಿಕ

ಗಾಳ ಹಾಕಿ ದಾಳ ಉರುಳಿಸಬೇಕು

ಅದೊಂದೇ ನಮ್ಮೆಲ್ಲರ ಗುರಿ

ವಾರದ ಶುರುವಿನಿಂದ ರಣರಂಗ

ಕಾದಾಟ ಅವರವರಿಗೆ ಬಿಟ್ಟ ವಿಚಾರ

ಕೊನೆಯಲ್ಲಿ ರಂಗಮಂಚ

ಇಲ್ಲಿ ಪಾನ ಪ್ರೀಯರುಂಟು

ಖಾನಾ ಪ್ರೀಯರೂ ಉಂಟು

ಇರಲು ತಾವಿಲ್ಲವೆಂದಲ್ಲ;

P.G ಯೇ ನಮ್ಮ ಅತಿಥಿಗೃಹಗಳು

Acidity ಯೇ ನಮ್ಮ ಆಸ್ತಿ

ಇದು ಗೋಳಲ್ಲ ಮಗನೇ

ಇದೇ ನಮ್ಮ ಬಾಳು!!