ನಮ್ಮ ಕಾಲೇಜಿನ ವಾರ್ಷಿಕ ಸ್ಮರಣ ಸಂಚಿಕೆಗೆ (ರೇಷ್ಮೆ ಕೃಷಿ ಕಾಲೇಜು,ಚಿಂತಾಮಣಿ) ನನ್ನ 'ಕನಸಿನ ಸ್ವೀಟಿ' ಹನಿಗವನ ಕೊಡಲು ಬಯಸಿದ್ದೇನೆ,ಆದ್ದರಿಂದ ತಾವುಗಳು ಈ ಕವನದ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಕೋರುತ್ತೇನೆ.
ಕನಸಿನ ಸ್ವೀಟಿ
ನೆನ್ನೆಯೇ ತಂದೆನೊಂದು ಸ್ಕೂಟಿ
ಕಣ್ಣಿಗೆ ಬಿದ್ದಿತೊಂದು ಬ್ಯೂಟಿ
ಅವಳು ಪಕ್ಕದ್ಮನೆಯ ಸ್ವೀಟಿ
ಆಕೆ ಈಗೀಗ ಜಸ್ಟ್ ಟ್ವೆಂಟಿ
ಆಹಾ! ನೋಡಲವಳು ತುಂಬಾ ಕ್ಯೂಟಿ
ಬರಲಿ ಎಂತಹುದೇ ಪೈಪೋಟಿ
ಅವಳಿಂದೆ ಸುತ್ತುವುದೇ ನನ್ನ ಡ್ಯೂಟಿ
ತೆಗೆಯುವೇ ಅಡ್ಡ ಬಂದವರ ಬೋಟಿ
ಜೀವನದ ಗೆರೆಯ ದಾಟಿ
ಮಾಡಬೇಕೆಂದಿರುವೆ ಅವಳ ಮನಸ ಲೂಟಿ
ಅವಳ ಹೃದಯ ಕದಿಯಲು
ಬೇಕಿದೆ ನನಗೆ ಅವಕಾಶ ಪ್ಲೆಂಟಿ
ಅವಳಿಲ್ಲದಾ... ಈ ಬದುಕು ಒಂಟಿ
ಮರುದಿನವೇ ಆದೆ ಅವಳ ಭೇಟಿ
ಹೇಳಿದೇ, ನೋಡು ಸ್ವೀಟಿ
ನಾನು ತುಂಬಾ ಕ್ಲಾರಿಟಿ
ನೀನೊಪ್ಪಿದರೆ ಆಗುವೆವು ನಾವು ಜಂಟಿ
ನಮ್ಮ ಪ್ರೀತಿಗಿದೆ ಲೈಪ್ ಟೈಮ್ ವಾರಂಟಿ
ಆ ವಿಷಯದಲಿ ಕೊಡುವೆ ನಿನಗೆ ಗ್ಯಾರಂಟಿ
ನಾ ನಿನ್ನ ಕೈಗಂಟಿದ ಗೋರಂಟಿ
ನಿನ್ನ ಹೃದಯ ತರಂಗಗಳ ಮೀಟಿ
ಆಗುವೆನು ನಾನು ಒಬ್ಬ ವ್ಯಾಲಂಟಿ
ನೀನೊಪ್ಪಿದರೆ ಊಟಿ
ಇಲ್ಲವೆಂದರೆ ಪಾಯ್ ಸನ್ ಫ್ರೂಟಿ
ಅವಳೊಪ್ಪಿದಳು ಕಾರಣ
ನಾನಂತೆ ಎಲ್ಲರಿಗಿಂತ ವೆರೈಟಿ
ಅವಳು ಎಲ್ಲದರಲ್ಲೂ ಚೂಟಿ
ಇಂತವಳ ನನಗಿತ್ತ ದೇವರಿಗೆ ನಮಸ್ಕಾರ ಕೋಟಿ
ಇನ್ನೇನು ಸೇರಬೇಕು ನನ್ನ ಅವಳ ತುಟಿ
ಅಪ್ಪ ಸುರಿದರು ಮೈ ಮೇಲೆ ಟೀ
ಕನಸಿಗೆ ಬಂದ ಸ್ವೀಟಿ
ಇನ್ನಾರು ಅಲ್ಲ ಪಕ್ಕದ್ಮನೆಯ
ಗೋಲ್ಡನ್ ಜ್ಯೂಬಿಲಿ ಆಂಟಿ
ಹೈ ಹೀಲ್ಡ್ ಚಪ್ಪಲಿಯ ಕುಂಟಿ
ಸದಾ ವಿಗ್ಗಂಟಿದ ಮೋಟಿ
ನೋಡಲು ತುಂಬಾ ಫ್ಯಾಟಿ
ಇಂತಹ ಕನಸ ಕಂಡೆನಗೆ
ಹೊಡೆಯಬೇಕೆನಿಸಿತು ನೈಂಟಿ
ಜೊತೆಗೆ ಬರುವಿರಾ ಗೆಳೆಯರೇ
ಕುಡಿಯಲು ಕಂಪನಿಗೆ
ನಾನೀಗ ಒಂಟಿ......ಒಂಟಿ
ಆಹಾ! ಮತ್ತೇ ಕಣ್ಣಿಗೆ ಬಿದ್ದಿತೊಂದು ಬ್ಯೂಟಿ
ಅವಳಾಗದಿರಲಿ ಪಕ್ಕದ್ಮನೆಯ ಮೇಕಪ್ ಆಂಟಿ
ಇದ ಕೇಳಿ ನಗದಿರೆ ಖಂಡಿತಾ
ಹೊಡೆಯುವೇ ನಿಮ್ಮನು ತೆಗೆದುಕೊಂಡು
ಲಾಟಿ ಇಲ್ಲವೇ ಚಾಟಿ....?
ಇದ ಕೇಳಿದ ಅಮ್ಮ ನಕ್ಕಳು
ಅದುವೇ ನನಗೆ ನಿಜವಾದ ಸ್ವೀಟಿ, ರೂಪಾಯಿ ಕೋಟಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!