ಮಲೆನಾಡಿನ ಕಂಪಿನ ಸಿರಿಯೆ,
ಭಾರತ ಮಾತೆಯ ಮಡಿಲಿನ ಮಗುವೆ,
ಕನ್ನಡ ತಾಯಿಯ ಹೆಮ್ಮೆಯ ಕುಡಿಯೆ,
ಕನ್ನಡ ಜನತೆಯ ನೆಚ್ಚಿನ ಕವಿಯೆ,
ನಿಮ್ಮಿಂದ ಅರಳಿದವು ಸುಂದರ ಕವನ,
ಓದಿದವರ ಮನಸಾಯಿತು ಪಾವನ,
ಮರೆಯಲಾರದ ಸಾಹಿತ್ಯದ ನಂದನವನ ,
ಅಚ್ಚಳಿಯದಂತೆ ಮೂಡಿದವು ನಿಮ್ಮ ಕವನ,
ನಿಮ್ಮಿಂದ ಸಾಹಿತ್ಯ ಲೋಕ ಚಂದನ,
ಕನ್ನಡದ ಕವಿಗಳ ಕೊಡುಗೆ ಅಪಾರ,
ಶ್ರೀಮಂತವಾಯಿತು ಸಾಹಿತ್ಯ ಬಂಡಾರ ,
ಸಾಹಿತ್ಯ ಕ್ಷೇತ್ರದ ದಿಗ್ಗಜ್ಜರು ನೀವು ,
ಹೃದಯಮಂದಿರದಿ ನೆಲೆಸಿದಿರಿ ನೀವು,
ನಮ್ಮೆಲ್ಲರ ಮನಸ್ಸು ಗೆದ್ದ ಕವಿಗಳು ನೀವು.
ಪ್ರತಿಕ್ರಿಯೆ (1)
ತಮ್ಮ ಮನಸು ಗೆದ್ದ ಕವಿಗಳು ರಚನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಕನ್ನಡ ಕಾವ್ಯ ಪರಂಪರೆಯ ಎಲ್ಲ ಶ್ರೇಷ್ಟ ಕವಿಗಳ ಕುರಿತ ತಮ್ಮ ಮೆಚ್ಚುಗೆ ಹಿಡಿಸಿತು. ಕವನದಲ್ಲಿ ಒಂದು ಲಾಲಿತ್ಯವಿದೆ, ಓಘವಿದೆ ಜೊತೆಗೆ ಪ್ರಾಸಬದ್ಧವಾಗಿದೆ ( ಅಂತ್ಯಪ್ರಾಸ ). ಅವರೆಲ್ಲ ನಿಮ್ಮ ಮನ ಗೆದ್ದಿದ್ದರೆ ನೀವು ನಮ್ಮ ಮನ ಗೆದ್ದಿದ್ದೀರಿ, ಸುಂದರ ಭಾವಾಭಿವ್ಯಕ್ತಿಯ ಕವನ ನೀಡಿದ್ದೀರಿ, ಧನ್ಯವಾದಗಳು.