ಪದಬಂಧವು ಪದಗಳ ರಂಗೋಲಿ. ಈ ಪದಗಳ ಚಿತ್ತಾರ ತುಂಬಾ ಪ್ರಾಚೀನವಾದುದು, ಇದು  ಆಯಾ  ಭಾಷೆ, ಸಂಸ್ಕೃತಿ, ಕಲೆ, ನಾಗರೀಕತೆ ಮತ್ತು ಅದರ ಸೃಷ್ಟಿ ಕರ್ತನ ಸ್ರಜನಶೀಲತೆಯ  ಆಧಾರದ ಮೇಲೆ ವೈವಿಧ್ಯತೆ ಪಡೆದುಕೊಳ್ಳುತ್ತದೆ.  ಕನ್ನಡದಲ್ಲಿಯೂ ಕೂಡ ನಾವು ದಿನ, ವಾರ ಮತ್ತು ಮಾಸ ಪತ್ರಿಕೆಗಳಲ್ಲಿ ಪದಬಂಧಗಳನ್ನು  ನಾವು ನೋಡಬಹುದು. ಇಂದು ಕೂಡ ಸಾಕಷ್ಟು ಜನ ಪದಬಂಧವನ್ನು  ಆಡುತ್ತಾರೆ. ಇದು ನಮ್ಮ ಭಾಷೆಯ ಜ್ಞಾನ ಮತ್ತು ನೆನಪಿನ ಶಕ್ತಿಯನ್ನು ಒರೆ ಹಚ್ಚುತ್ತದೆ. ಪದಬಂಧ  ನಮ್ಮ ಪದ ಭಂಡಾರವನ್ನು ಹೆಚ್ಚಿಸುತ್ತದೆ. ನಮ್ಮೆಲ್ಲರ ಕನ್ನಡ ಶಬ್ದ ಭಂಡಾರವನ್ನು ಹೆಚ್ಚಿಸಲು ಈ ಒಂದು ಪ್ರಯತ್ನ. ಕನ್ನಡಕ್ಕಾಗಿ ಮತ್ತು ಕನ್ನಡಿಗರಿಗಾಗಿ   ಈ ಕನ್ನಡಗಿನ ಅಳಿಲು ಸೇವೆ. 

ಕನ್ನಡ ಪದಬಂಧ. ಕನ್ನಡಿಗರ ಭಾಷೆಯ ಜ್ಞಾನ ಮತ್ತು ನೆನಪಿನ ಶಕ್ತಿಯನ್ನು ಒರೆ ಹಚ್ಚುವ ಆಪ್.

ಸುಲಭವಾದ ಕನ್ನಡ ಶಬ್ದಗಳನ್ನು ಅವುಗಳ ವಿವರಣೆ ಮತ್ತು ಅಕ್ಷರಗಳ ಸಂಖ್ಯೆ ಆಧಾರದ ಮೇಲೆ ಕಂಡು ಹಿಡಿಯಿರಿ.

ವೈಶಿಷ್ಟ್ಯಗಳು

- ೭ * ೭ ಪದಬಂಧ

- ೫ ಉಚಿತ ಪದಬಂಧಗಳು

- ಜಾಹಿರಾತುಗಳಿಂದ ಮುಕ್ತ

- ಕನ್ನಡ ಕೀ ಪ್ಯಾಡ , ಕನ್ನಡದಲ್ಲಿಯೇ ಟೈಪ್ ಮಾಡಬಹುದು

- ಅಕ್ಷರ , ಪದ ,ಪದಬಂಧ ಸುಳಿವುಗಳು ಲಭ್ಯ ಮಾಡಲಾಗಿದೆ.

- ಆಡಲು ಇಂಟರ್ನೆಟ ಅವಶ್ಯಕತೆ ಇಲ್ಲ

- ದೊಡ್ಡ ಪರದೆಯ ಇದ್ದರೆ ಉತ್ತಮ ಅನುಭವ

ಆಟ ಆಡುತ್ತಾ ನಿಮ್ಮ ಕನ್ನಡ ಶಬ್ದ ಸಂಗ್ರಹ ಬೆಳಿಸಿ

ಈ ಪದಬಂಧ ಹೇಗೆ ಆಡಬೇಕು ವೀಡಿಯೋ ಲಿಂಕ್
http://youtu.be/IzFTw1s7kmU

ಗೂಗಲ್ ಆಪ್ ಲಿಂಕ್
https://play.google.com/store/apps/details?id=com.nimblevision.kannadacr...