ಮಾತು ಬಲ್ಲವನಲ್ಲಾ ನಾನು

ಕವಿತೆಯೊಂದ ಹೇಗೆ ಪೋಣಿಸಲಿ

ಅಂದದ ಗಂಧಗಾಳಿ ಇಲ್ಲದವನು

ನಿನ್ನ ಸೌಂದರ್ಯವ ಹೇಗೆ ವರ್ಣಿಸಲಿ................................................

 

 

ಕಾಸು ಉಳ್ಳವನಲ್ಲಾ ನಾನು

ಪ್ರೀತಿಯೊಂದರಿಂದ ಹೇಗೆ ರಂಜಿಸಲಿ

ಇವ ಪ್ರೀತಿಸೋಕೆ ಯೋಗ್ಯ ಎಂದು

ನಿನ್ನ ಮನಸನ್ನು ಹೇಗೆ ಒಪ್ಪಿಸಲಿ....................................................

 

 

ಪವಾಡಗಳು ಗೊತ್ತಿಲ್ಲ ನನಗೆ

ನಿನ್ನ ನೋಟವ ಹೇಗೆ ಅರ್ಥೈಸಲಿ

ಶಿಲ್ಪಿಯಾಗಿ ಹುಟ್ಟಿಲ್ಲ ನಾನು

ನಿನ್ನ ಚಿತ್ರವ ಹೇಗೆ ಬಿಡಿಸಲಿ........................................................

 

 

ಕನ್ನಡಿಯೇ ಉಗಿಯುತ್ತಿದೆ ಮಗನೇ

ಇನ್ನೆಷ್ಟು ಬಾರಿ ತಲೆಬಾಚುವುದೆಂದು

ಕಾಫಿಟೀ ಲೋಟಗಳೂ ಸುಡುತ್ತಿವೆ

ಅವಳಿಗಾಗಿ ನಮ್ಮ ಹಿಂಸಿಸಬೇಡ ಎಂದು

ರಸ್ತೆಗಳೂ ಕಲ್ಲನ್ನೆರಚಿ  ಎಚ್ಚರಿಸಿವೆ

 

ಇನ್ನೊಮ್ಮೆ ಇವಳ ಹಿಂದೆ ಬಂದರೆ ಎಂದು.......................................