ಹೇಳೆ ಗೆಳತಿ

ನೀ ಹೇಳೆ ?

ಹೇಗೆ ನಾನಿನ್ನ

ಸೇವೆ ಮಾಡಲಿ !

ನಿನ್ನ ತುರುಬಿನಲ್ಲಿ

ಹೂವಾಗಿರಲೆ.

ಹಣೆಯಲ್ಲಿ

ಕುಂಕುಮವಾಗಿರಲೆ

ಕಣ್ಣೂಳಗೆ

ಕಾಂತಿಯಾಗಿರಲೆ

ಮೂಗಿನೊಳಗೆ

ಉಸಿರಾಗಿರಲೆ

ಕಿವಿಯೊಳಗೆ

ಮಧುರ

ದನಿಯಾಗಿರಲೆ

ನಾಲಗೆಯಲ್ಲಿ

ರುಚಿಯಾಗಿರಲೆ

ಕೊರಳೊಳಗೆ

ತಾಲಿಯಾಗಿರಲೆ

ಕ್ಯಯೊಳಗೆ

ಬಳೆಯಾಗಿರಲೆ

ಹ್ರುದಯದಲ್ಲಿ

ಬಡಿತವಾಗಿರಲೆ

ಕಾಲೊಳಗೆ

ಉಂಗುರವಾಗಿರಲೆ

ಮ್ಯೆಯೊಳಗೆ

ಹೊಂಬಣ್ಣವಾಗಿರಲೆ