ಸಂಪದದಲ್ಲಿ ಆರಂಭಶೂರತನಕ್ಕೆ ಸ್ಪರ್ಧೆಯಿಟ್ಟಲ್ಲಿ ಮೊದಲಿಗ ನಾನಾಗುವುದರಲ್ಲಿ ಸಂದೇಹವಿಲ್ಲ. ನಾನು ಶುರು ಮಾಡಿ, ಅಷ್ಟಕ್ಕೇ ಬಿಟ್ಟ ಲೇಖನಗಳು, ಅದು_ಇದು_ಮತ್ತೊಂದು ಸಾಕಷ್ಟಿವೆ. ನಾನು ಅವುಗಳಲ್ಲಿ ಯಾವುದನ್ನೂ ಸದ್ಯಕ್ಕೆ ಮುಂದುವರಿಸುವ ಸಾಧ್ಯತೆ ನನಗಂತೂ ಕಂಡುಬರುತ್ತಿಲ್ಲ.
ಪಾರ್ಥರಾದಿಯಾಗಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು.
ಕ್ಷಮಿಸಿ, ನಾನು ಸೋತಿದ್ದೇನೆ.
......................
ಕೊನೆ ಹನಿ ... ಹಲವಾರು ಸಂಕೀರ್ಣ ಸಮಸ್ಯೆಗಳಿಗೆ ನನ್ನ ಹತ್ತಿರ ತುಂಬ ಸುಲಭವಾದ ಉತ್ತರಗಳಿವೆ (ನೀವು ನನ್ನ ದೂರವಾಣಿ ಸಂಖ್ಯೆಯನ್ನು ಕೇಳುವ ಮುನ್ನ ಸೇರಿಸಿಬಿಡುತ್ತೇನೆ); ಆದರವು, ತಪ್ಪು ಉತ್ತರಗಳಾಗಿವೆ!
ಪ್ರತಿಕ್ರಿಯೆ (7)
ಅನ್ನುವ ಮಾತಿಗಿಂತ
'ನಾನು ಇರುವುದೇ ಹೀಗೆ'
ಎನ್ನುವ ಭಂಡತನದ ಮಾತೆ ನನಗೆ ಪ್ರಿಯವೆನಿಸುತ್ತಿದೆ :-)
ಈಗ ಮನಸ್ಸು ನಿರಾಳ.
ಕಳೆದ ಎರಡು ಮೂರು ವರುಷಗಳಿಂದ ಆರೋಗ್ಯದ ಕಾರಣದಿಂದಾಗಿ, ಮನೆ ಹಾಗೂ ಕಂಪೆನಿಯಲ್ಲಿ ಹೆಚ್ಚಿದ ಜವಾಬ್ದಾರಿಗಳಿಂದಾಗಿ ನಾನು ಕೂಡ ಬರೆಯುವುದನ್ನು ಹೆಚ್ಚು ಕಡಿಮೆ ನಿಲ್ಲಿಸಿಬಿಟ್ಟಿದ್ದೆ. ಆದರೆ ಓದುವುದನ್ನು ನಿಲ್ಲಿಸಿರಲ್ಲ. ಪ್ರತಿನಿತ್ಯ ಸಂಪದವನ್ನು ನೋಡುವಾಗ ಇದನ್ನು ನಡೆಸುವ ತಂತ್ರಾಂಶವನ್ನು ಉತ್ತಮಪಡಿಸುವುದರಲ್ಲೇ ನನ್ನ ಸಮಯ ಕಳೆದುಬಿಡುತ್ತದೆ. ಬರೆಯಲು ಸಾಧ್ಯವೇ ಆಗದು. ಕೆಲವೊಮ್ಮೆ ಪುಟ್ಟದಾದ ಒಂದು ಪ್ರತಿಕ್ರಿಯೆ ಬರೆಯುವುದೂ ಕಷ್ಟ ಎನಿಸಿಬಿಡುತ್ತದೆ. ಆದರೂ ಸಮಯ ಮಾಡಿಕೊಂಡು ಬರೆದರೆ ಅದು ತರುವ ಖುಷಿಯೇ ಬೇರೆಯ ರೀತಿಯದ್ದು.
ನನ್ನ ಅಳಲೆಂದರೆ, ನನ್ನ ಆಲಸ್ಯದಿಂದಾಗಿ ಸಮಯದ ಸದುಪಯೋಗವಾಗುತ್ತಿಲ್ಲ.
ಹಾಗೇ ಯೋಚಿಸುತ್ತ ಎಷ್ಟೋ ಕಾಲ ಕಳೆದು ಹೋಯಿತು :)
ಮತ್ತು ಸಾಹಿತ್ಯವಷ್ಟೆ ಜೀವನವಲ್ಲ !
ಜೀವನದ ವಿಸ್ತಾರ ರೂಪಗಳು ಬಹಳ !
ಸೋತಿದ್ದೇನೆ ಅನ್ನುವ ಮಾತಿಗೆ ಅರ್ಥವಿಲ್ಲ !
ಮೌನವಾಗುವುದು
ಮನದ ಇಚ್ಛೆ ;
ಭರಿಸಲಾಗದಾಗ
ಬರಹವಾಗಿಸುವುದು
ಮನಸಿನ ಸ್ವೇಚ್ಛೆ !
ನಿಮ್ಮೆಲ್ಲರ ಪ್ರೋತ್ಸಾಹ ನನ್ನನ್ನು ಹೀಗೆ ಹೇಳಲು ಹುರಿದುಂಬಿಸಿದೆ: ನಾನಿನ್ನೂ ಸೋತಿಲ್ಲ; ಸದ್ಯಕ್ಕೆ ಒಮ್ಮೆ ಕೆಳಗೆ ಬಿದ್ದಿರುವೆ ಅಷ್ಟೇ!
ನಿಮ್ಮವ
ಶಿವರಾಮ
>>>ಹಲವಾರು ಸಂಕೀರ್ಣ ಸಮಸ್ಯೆಗಳಿಗೆ ನನ್ನ ಹತ್ತಿರ ತುಂಬ ಸುಲಭವಾದ ಉತ್ತರಗಳಿವೆ (ನೀವು ನನ್ನ ದೂರವಾಣಿ ಸಂಖ್ಯೆಯನ್ನು ಕೇಳುವ ಮುನ್ನ ಸೇರಿಸಿಬಿಡುತ್ತೇನೆ); ಆದರವು, ತಪ್ಪು ಉತ್ತರಗಳಾಗಿವೆ!
:) ತಪ್ಪೋ ಸರಿಯೋ...ಅಂತೂ ನಿಮ್ಮ ಬಳಿ ಸುಲಭವಾದ ಉತ್ತರಗಳಿವೆಯಲ್ಲಾ.. ಕೂಡಲೇ ದೂರವಾಣಿ ಸಂಖ್ಯೆ ನೀಡಿ..:)