ದೇವಾ, ಇಡೀ ಜಗವನು ಬೆಳಗಿಸುವ ನಿನಗೆ
ಜ್ನಾನದ ಕಿರಣ ನೀಡುವುದು ದೊಡ್ದದೇನಲ್ಲ
ದಯಾಸಾಗರನೇ, ಇಡೀ ವಿಶ್ವವನು ಪೋಷಿಸುವ ನಿನಗೆ
ತುತ್ತು ಅನ್ನವನು ನೀಡುವುದು ದೊಡ್ಢದೇನಲ್ಲ
ಕರುಣಾಸಾಗರನೇ, ಇಡೀ ಬ್ರಹ್ಮಾಂಡವನು ರಕ್ಷಿಸುವ ನಿನಗೆ
ಪುಟ್ಟ ಆಸರೆಯನು ನೀಡುವುದು ದೊಡ್ಢದೇನಲ್ಲ
ಪ್ರೇಮಸಾಗರನೇ, ಇಡೀ ಪ್ರಪಂಚವನು ತಣಿಸುವ ನಿನಗೆ
ನೀರ ಹನಿಯನು ನೀಡುವುದು ದೊಡ್ದದೇನಲ್ಲ
ನಾನರಿತೆ, ಇದೆಲ್ಲವುದರ ಪ್ರಾಪ್ತಿಗಾಗಿ ಬೇಕು ಶ್ಹ್ರದ್ದಾ ಭಕ್ತಿ
ಆಗಲೇ ಲಭಿಸುವುದು ಬಾಳಲಿ ಮುಕ್ತಿ
ರಚನೆ: ಜೈವಂತ ಎಸ್. ಗಾಂಜೇಕರ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!