ಪುಟ್ಟ ಗೌರಿ ಇವಳು ನನ್ನ ಪುಟ್ಟ ಗೌರಿ ಇವಳು

ಹಾಲುಗೆನ್ನೆಯ ತುಂಟ ಗೌರಿ ಇವಳು

ಹೊಳೆಯುವ ಕಣ್ಣಗಳ ಮುದ್ದು ಗೌರಿ ಇವಳು

 

ಕುಸುಕುಸು ಅಳುತಾ ಅವ್ವನ ಕರೆಯುವಳು

ಅವಳು ಬರುತ್ತಲೇ ಕಿಲಕಿಲ ನಗುವಳು

ಪುಟ್ಟ ಕೈಗಳಿಂದ ಕೆನ್ನೆ ಸವರುತ

ಹಾಲೂಣಿಸೆನ್ನುವಳು

 

ಪಟ್ಟಪಟ್ಟಿ ಹೂವಿನ ಅಂಗಿ ಉಟ್ಟವಳು

ಹಾಲುಗಡಗ ತೊಟ್ಟ ಪೋರಿ ಇವಳು

ಕಾಡಿಗೆ ಬೊಟ್ಟಿನ ಚಲುವೆ ಇವಳು

 

ತೊಟ್ಟಿಲು ಬೇಡಿ ಅಳುವವಳು

ಅವ್ವನ ತೋಳಲಿ ಮಲಗುವಳು

 

ಗುಂಗುರು ಕೂದಲಿನ ಚೆಂದುಳ್ಳಿಯಿವಳು

ನನ್ನ ನೋಡುತ ಕಣ್ಣು ಹೊಡೆಯುವಳು

ಮುದ್ದು ಸೂಸೆಯನು ಮುದ್ದು ಮಾಡಲು ಹೋದರೆ

ಸುಸ್ಸು ಮಾಡಿ ದೂರ ತಳ್ಳುವಳು

 

ನನ್ನ ತಂಗಿಯ ಪುಟ್ಟ ಕಂದಳಿವಳು

ಪುಟ್ಟ ಕೈಗಳ ಪುಟ್ಟ ಕಾಲಗಳ

ಮುದ್ದು ಮಲ್ಲಿಗೆಯ ಪುಟ್ಟ ಗೌರಿ ಇವಳು

 

ನಾಗೇಶ ತಳವಾರ