ಬರದಲ್ಲಿನ ತುಸು ನೀರನ್ನು ಹೀರಿ ಕಾಡುತ್ತಿದ್ದಾನೆ ಸೂರ್ಯ,

ಅದರೊಂದಿಗೆ ಕೊಡುತ್ತಿದ್ದಾನೆ ಸುಡುವ ಉರಿಯ,

ತನ್ನ ಚಿಗುರು ಮಕ್ಕಳಿಗೆ ನೀರುಣಿಸಲಾಗದೆ ಕೊರಗುತ್ತಿದ್ದಾಳೆ ಭೂತಾಯಿ,

ಸಾಕಿದ ಮಗ ಸಲಹುತ್ತಾನೆಂದು ನಂಬಿದ್ದ ತಾಯಿಗೆ ಮನುಜ ಕೊಟ್ಟ ಕೈ,

ತುತ್ತು ಉಣಿಸಿದ ಹಸಿರ ಮಡಿಲಿಗೆ ಇಟ್ಟ ಬೆಂಕಿಯ ವ್ಯಥೆ,

ನೊಂದು ಶಪಿಸುತ್ತಿದ್ದಾಳೆ ಮುಂದೆ ನಿನ್ನದೂ ಆಗುವುದು ದಾರುಣ ಕಥೆ,

ಮುಂದೆ ನೀರಿದೆ ಎಂದು ನಂಬಿಸಿ ಆಟವಾಡುತ್ತಿದೆ ಬಿಸಿಲ್ಗುದುರೆ,

ನೀರಿಲ್ಲದೆ ದಣಿದ ಜೀವಕೆ ಬೆಳೆಯೂ ಇಲ್ಲದೆ ಆಗಿದೆ ಗಾಯದ ಮೇಲೆ ಬರೆ,

ಬೇಲಿಯೇ ಎದ್ದು ಹೊಲ ಮೆಯ್ದಂತಾಗಿದೆ ಪ್ರಕೃತಿಯ ಪರಿಸ್ಥಿತಿ,

ಬೇರೆಯವರಿಗೇನು ಮನುಜ ತನ್ನವರಿಗೆ ಮಾಡುವ ತಿಥಿ,

ಜೀವಜಲ ಎಲ್ಲರ ಸ್ವತ್ತು,

ಅನವಶ್ಯಕವಾಗಿ ಪೋಲುಮಾಡಿ ಭವಿಷ್ಯದಲ್ಲಿ ತರಬೇಡಿ ವಿಪತ್ತು.