ಬ್ರಿಟಿಷರು ಬಂದರು ತಕ್ಕಡಿ ತಂದರು ಉಂಡು ಹೋದರು ಕೊಂಡೂ ಹೋದರು ನಮ್ಮ ದೌಬ್ರಲ್ಯ ಅರಿತರು ಮಂಗ ಮಾಡಿದರು ಎತ್ತಿಕಟ್ಟಿದರು ರಾಜ್ಯಗಳನ್ನೂ ಗೆದ್ದರು ಅವರ ಗಾಣಕ್ಕೆ ನಮ್ಮವರನ್ನು ಎತ್ತುಗಳಂತೆ ದುಡಿಸಿಕೊಂಡರು ರಕ್ತ ಹಿಂಡಿದರು ಅಧಿಕಾರ ದಂಡ ಹಿಡಿದರು ವಿರೋಧಿಸಿದವರನ್ನು ಕೊಂದರು ಒಡೆದು ಆಳಿದರು ವಿಷ ಬೀಜ ಬಿತ್ತಿದರು ಭಾಷೆ ಮತ ಸಂಸ್ಕೃತಿಯನ್ನು ಅವಮಾನಿಸಿದರು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಂಡರು ಗುಲಾಮರನ್ನಾಗಿಸಿದರು ತಾಯಿ ಭಾರತಾಂಬೆಯನ್ನು ಸಂಕೋಲೆಯಲ್ಲಿ ಬಂಧಿಸಿದರು ಕುಣಿಕುಣಿದಾಡಿದರು ನಮ್ಮವರಿಗೆ ಮಂಕುಬೂದಿ ಎರಚಿದರು ಸಂಪತ್ತು ಗಂಟುಕಟ್ಟಿ ಸೂರೆಗೈದರು ಭಾರತಮಾತೆ ಶಪಿಸಿದಳು ಎರಡು ಮಹಾಯುಧ್ಧದಿಂದ ಫಿರಂಗಿಗಳು ನಲುಗಿದರು ಅಹಂಕಾರಕ್ಕೆ ತಕ್ಕ ಪಾಠಕಲಿತರು ಕದ್ದು ತಿಂದದ್ದನ್ನು ಕರಗಿಸಿಕೊಂಡರು ಬ್ರಿಟಿಷರು ಬಂದರು ಬಂದಿದ್ದಕ್ಕೆ ಪ್ರತಿಫಲ ಉಂಡರು -ಎಸ್.ಕೆ-
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!