ಬೆಳಗ್ಗೆ ಹೆಸರು ಬೇಳೆ ಮತ್ತು ಅವಲಕ್ಕಿ ಸೇರಿಸಿ, ನೆನೆಯಲು ಇಡಿ.
ಮಧ್ಯಾಹ್ನದ ವೇಳೆ ಬೇಕಾಗುವಷ್ಟು ನೀರು ಸೇರಿಸಿ, mixer/grinder ನಲ್ಲಿ ತಿರುವಿ, ಹಿಟ್ಟು ತಯಾರಿಸಿಕೊಳ್ಳಿ.
ಹಿಟ್ಟಿಗೆ ಅಕ್ಕಿ ರವೆ ಸೇರಿಸಿ, ಬೆರೆಸಿಕೊಳ್ಳಿ.
ಮಾರನೆ ದಿನಕ್ಕೆ ರುಚಿಯಾದ ಇಡ್ಲಿ ತಯಾರಿಸಲು, ಹಿಟ್ಟು ಉಕ್ಕಿರುತ್ತದೆ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಇಡ್ಲಿ ಅಟ್ಟಕ್ಕೆ ಹಿಟ್ಟು ಹೊಯ್ದು, ಬಿಸಿ ಬಿಸಿ ಇಡ್ಲಿ ತಯಾರಿಸಿ, ಚಟ್ನಿ/ಸಾಂಬಾರ್ ನೊಂದಿಗೆ ಬಡಿಸಿ.
ಪ್ರತಿಕ್ರಿಯೆ (3)
ಇನ್ನು ರುಚಿಯಲ್ಲಿ ಹೇಳುವುದಾದರೆ ಬರೇ ಇಡ್ಲಿಯನ್ನು ತಿಂದರೆ ಅಕ್ಕಿಯ ರುಚಿಯ ಹಿನ್ನೆಲೆಯಲ್ಲಿ ಹೆಸರುಬೇಳೆಯ ರುಚಿಯೂ ನಾಲಿಗೆಗೆ ತಿಳಿಯುತ್ತಿತ್ತು. ಚಟ್ಣಿಯ ಜೊತೆ ತಿಂದಾಗ ಮಾತ್ರ ಮಾಮೂಲಿ ಇಡ್ಲಿಯ ರುಚಿಯಂತೆಯೇ.
ಮುಂಬರುವ ವಾರಗಳಲ್ಲಿ ಕಡಲೆಬೇಳೆ ಮತ್ತು ತೊಗರಿ ಬೇಳೆ ಇಡ್ಲಿಗಳ ಪ್ರಯೋಗವೂ ಪಟ್ಟಿಯಲ್ಲಿದೆ. ಆದರೆ ನನಗನಿಸುವಂತೆ ಈ ೪ ಬೇಳೆಗಳಲ್ಲಿ ಉದ್ದನ್ನು ಹೊರತುಪಡಿಸಿ ಮಿಕ್ಕ ೩ಕ್ಕೂ ತಮ್ಮದೇ ಆದ ರುಚಿ ಸ್ವಲ್ಪ ಬಲವಾಗಿಯೇ ಇರುವುದರಿಂದ ಉದ್ದಿನ ಬೇಳೆ ಇಡ್ಲಿಯ ನ್ಯೂಟ್ರಲ್ ರುಚಿ ಅವುಗಳಿಗೆ ಬರುವುದಿಲ್ಲವೇನೋ! ಪ್ರಯೋಗ ಮಾಡಲಂತೂ ಅಡ್ಡಿಯಿಲ್ಲ! ಧನ್ಯವಾದಗಳು ಸುಮಾ ಅವರೆ! ನಿಮ್ಮ ಪಾಕಪ್ರಯೋಗ ಹೀಗೆಯೆ ಮುಂದುವರೆಯಲಿ! - ಕೇಶವಮೈಸೂರು