ಥೈಲೆ೦ಡ್  ಹನಿಗಳು

1   ಥೈಲೆ೦ಡಿನಲ್ಲಿ

    ’ತು೦ಡುಡುಗೆ ’ ಎನ್ನಬೇಕಿಲ್ಲ;

    ’ಉಡುಗೆ’ ಎ೦ದರೆ ಅಷ್ಟೇ !

2  ಮದಿರೆ ಮಾನಿನಿ ಎರಡೂ

   ಅಭಿನ್ನ ಥೈಲೆ೦ಡಿನಲ್ಲಿ,

  ಒ೦ದರ ಬಳಿ ಇನ್ನೊ೦ದು

  ಸಿಕ್ಕೇ  ಸಿಗುತ್ತದೆ !

3    ಥೈಲೆ೦ಡ್ ಎ೦ದರೆ

     ಪುಟ್ಟ ಕಣ್ಣಿನ

    ತಟ್ಟು ಮೂಗಿನ

    ಬೆಳ್ದಾವರೆಗಳ

   ದೊಡ್ಡ ಕೊಳ !

4  ಥೈಲೆ೦ಡಿಗರು

   ತು೦ಬಾ ಜಾಣರು-

   ತಮ್ಮದನ್ನೆಲ್ಲಾ

  ಚೆನ್ನಾಗಿ ತೋರಿಸಿ

  ಕಾಸು ಕೀಳುವುದರಲ್ಲಿ!

5    ರಾತ್ರಿಯಲ್ಲಿ ಪಟ್ಟಾಯಾ

    ಹಾ೦ಗ್ ಕಾ೦ಗ್,

   ದುಡ್ಡಿದ್ದವನೇ

  ಕಿ೦ಗ್ ಕಾ೦ಗ್ !

6   ಕೆಲವು ನೃತ್ಯಗಳನ್ನು

    ಅಶ್ಲೀಲ ಎನ್ನಬಾರದು,

    ಅವಿರುವುದೇ ಹಾಗೆ;

    ಹುಲಿಯನ್ನು-

   ’ನೀನು ಕ್ರೂರವಾಗಿದ್ದೀಯ’

   ಎನ್ನಲಾದೀತೆ?

          -ಎಸ್.ಪಿ.ಪದ್ಮಪ್ರಸಾದ್,(ಕಾವ್ಯಜೀವಿ)

(ಚಿತ್ರ: ಲೇಖಕರು ಸ್ವತ: ತೆಗೆದದ್ದು)

 

 ವಿಳಾಸ : ಡಾ.ಎಸ್. ಪಿ. ಪದ್ಮಪ್ರಸಾದ್

 ’ತೃಪ್ತಿ’- 2 ನೇ ಕ್ರಾಸ್, ಕನಕಾ೦ಬರ ರಸ್ತೆ

ಗೋಕುಲ ಬಡಾವಣೆ,ತುಮಕೂರು-572 104