01#
ಸುಗಂಧದ ಪರಿಮಳ ಪಸರುವ ಹೊತ್ತು ;
ವಿಷಾಧದ ಬೂದಿ ಬುಡದಲ್ಲೇ ಬಿತ್ತು !
02#
ಅಂಗಳದಲ್ಲಿ ಕೈಮುಗಿದು ವಿನೀತನಾಗಿ ನಿಂತೆ... ಎದುರು ಬಂದ ದೇವಿ ಕಿರುನಕ್ಕಳು...
03#
ದೇವಸ್ಥಾನಕ್ಕಿಂತ ಹೆಚ್ಚು ಪ್ರಾರ್ಥನೆಗಳು ಆಸ್ಪತ್ರೆಯ ಗೋಡೆಗಳು ಕೇಳುತ್ತವಂತೆ...
ಮತ್ತ್ಯಾರೋ ಸಾವಿನ ಮನೆ ಎಂದದ್ದು ನೆನಪಾಯಿತು.
04#
ಅಂಗಳದಲ್ಲಿ ಕೈಮುಗಿದು ವಿನೀತನಾಗಿ ನಿಂತೆ... ಎದುರು ಬಂದ ದೇವಿ ಕಿರುನಕ್ಕಳು...
05#
ಖಯಾಲಿಗೆಂದು ಕುಡಿದು ಬಿಟ್ಟ
ಖಾಲಿ ಸೀಸೆಯಲಿ ಅವನು ಬದುಕು ಕಟ್ಟಿಕೊಂಡ.
- ವಿ'ರಾವ್.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!