ನೀವು ಸಂಪೂರ್ಣವಾಗಿ ನಮ್ಮಂತೇ ಆಗುತ್ತೀದ್ದೀರಿ

ಸಹೋದರರೇ, ಇಲ್ಲಿಯವರೆಗೆ ಎಲ್ಲಿ ಮರೆಯಾಗಿದ್ದೀರಿ?

ನಾವು ಶತಮಾನದಿಂದ ಸಹಿಸಿಕೊಂಡ

ಅದೇ ಮೂರ್ಖತನ, ಅದೇ ಅಂಧಕಾರ

ನಿಮ್ಮ ಬಾಗಿಲಿಗೂ ತಲುಪಿದೆ !

ಅರೇ ಧನ್ಯವಾದಗಳು, ತುಂಬಾ ಧನ್ಯವಾದಗಳು

 

ಧರ್ಮದ ಭೂತವು ನೃತ್ಯವಾಡುತ್ತಿದೆ

ಶಾಶ್ವತ ಹಿಂದೂ ರಾಜ್ಯ ಕಟ್ಟುತ್ತೀರಾ?

ಎಲ್ಲವನ್ನೂ ಉಲ್ಟಾ ಮಾಡುತ್ತೀರಾ?

ನಿಮ್ಮ ಸುಂದರ ತೋಟವನ್ನು ಧ್ವಂಸಗೈಯುತ್ತೀರಾ?

 

ನೀವು ಕುಳಿತು ಯೋಚನೆಮಾಡಿರಿ

ಪೂರ್ತಿಯಾಗಿದೆ ಅದರ ತಯಾರಿ

 

ಯಾರು ಹಿಂದೂ ಯಾರೂ ಹಿಂದೂವಲ್ಲ

ನೀವೂ ಜಾರಿ ಮಾಡುವಿರಿ ಫತ್ವಾ

ಅಲ್ಲೂ ಬದುಕುವುದು ಕಷ್ಟವಾಗಬಹುದು

ಬೆವರಿನಲ್ಲೂ ರಕ್ತ ಸುರಿಯಬಹುದು

ಎಲ್ಲೆಲ್ಲೂ ರಕ್ತವೇ ಕಾಣಬಹುದು

ನಿಮ್ಮ ಮೇಲೂ ಹಲ್ಲೆಯಾಗಬಹುದು

ಅಲ್ಲೂ ಉಸಿರಿಗಾಗಿ ತಡಕಾಡಬಹುದು

 

ಹಣೆಯ ಮೇಲೆ ಚಿಂತೆಯ ಗೆರೆಗಳು

ಸ್ವಲ್ಪವೂ ಕಲಿಯಲಿಲ್ಲ ನೆರೆಯವರಿಂದ !

ನಾವು ಎಂತ ದುರ್ದೆಶೆಯನ್ನು ಮಾಡಿದ್ದೇವೆ

ಸ್ವಲ್ಪವೂ ನಿಮ್ಮ ಕಣ್ಣಿಗೆ ಗೋಚರಿಸಲಿಲ್ಲವೇ?

 

ನಿಮ್ಮ ದಾರಿಯಲ್ಲಿರುವ ಗುಂಡಿಗಳ ನೋಡಬೇಡ

ಬದಲು ಹಿಂದಿನ ಜಮಾನವನ್ನು ಹಿಂದಕ್ಕೆ ಪಡಿ !

ನಾವು ಯಾವುದರ ಕುರಿತು ಆಳುತ್ತಿದ್ದೇವೆಯೋ

ನೀವೂ ಅದನ್ನು ಈಗ ಮಾಡಿದ್ದೀರಿ

ನಾವು ಆಳವಾಗಿ ವಿಷಾದಿಸುತ್ತೇವೆ

ನಾನು ದುಃಖದಿಂದ ಯೋಚಿಸುತ್ತಿದ್ದೆ

ಯೋಚಿಸಿ ಯೋಚಿಸಿ ಇಂದು ಬಹಳ ನಗು ಬಂತು

ನೀವು ಸಂಪೂರ್ಣವಾಗಿ ನಮ್ಮಂತೆ ಆಗುತ್ತೀದ್ದೀರಿ !

 

ನಾವೆಂದೂ ಎರಡು ಕೋಮುಗಳಾಗಿರಲಿಲ್ಲ, ಸಹೋದರರೇ !

ನರಕಕ್ಕೆ ಹೋಗಲಿ ಶಿಕ್ಷಣ-ಕಲಿಕೆ

ಈಗ ಅಜ್ಞಾನದ ಗುಣಗಾನ

 

ಸಾವಿಗೂ ಹೆದರದೆ ಹೋರಾಡಿ, ಗೆದ್ದೇ ಗೆಲ್ಲುವ ತನಕ

ಉಲ್ಟಾ ಹೆಜ್ಸೆಗಳನ್ನು ಹಾಕಿ ಹಿಂದಕ್ಕೆ ನಡೆಯಿರಿ

ಬೇರೆ ವಿಷಯಗಳು ನಿಮ್ಮ ಮನಹೊಕ್ಕದಂತೆ

ಕೇವಲ ಹಿಂದಕ್ಕೆ ದೃಷ್ಥಿಯನ್ನಿಡಿ

ಒಂದೇ ಗುರಿಯೊಂದಿಗೆ ಹಿಂದಕ್ಕೆ ನಡೆಯುತ್ತಿರಿ

ಮತ್ತೆ ಮತ್ತೆ ಪುನರಾವರ್ತಿಸಿ

ಭಾರತ ಎಂಥ ಮಹಾನ್ ಶೂರನಾಗಿತ್ತು !

ಸಂಪತ್ತಿನಿಂದ ಕೂಡಿ ಐಷರಾಮವಾಗಿತ್ತು !

 

ನೀವು ಪುನ: ತಲುಪುವಿರಿ

ಹೌದು, ಪರಲೋಕಕ್ಕೆ ತಲುಪಿವಿರಿ!

ನಾವೋ ಅಲ್ಲಿ ಮೊದಲೇ ಇದ್ದೀವಿ

ಯಾವಾಗ ಆ ನರಕಕ್ಕೆ ತಲುಪಿತ್ತೀರೋ,

ಸಮಯ ಮಾಡಿಕೊಂಡು

ಅಲ್ಲಿಂದ ಪತ್ರ-ಗಿತ್ರ ಬರೆಯಿರಿ !

 

ನೀವು ಸಂಪೂರ್ಣವಾಗಿ ನಮ್ಮಂತೇ ಆಗುತ್ತೀದ್ದೀರಿ

ಸಹೋದರರೇ, ಇಲ್ಲಿಯವರೆಗೆ ಎಲ್ಲಿ ಮರೆಯಾಗಿದ್ದೀರಿ?

                                       - ಅನುವಾದ: ಶ್ರೀನಿವಾಸ ನಟೇಕರ್