ಹೃದಯದ ತಂತಿಯನ್ನ ಅದ್ಯಾರೋ ಮೀಟುತಿದ್ದಾರೆ.

ಮತ್ತೆ ಹೃದಯ ಒಡೆದು ಹೋಗ ಭಯ ಕಾಡುತ್ತಿದೆ.

ಯಾಕೆಂದರೆ, ಅಲ್ಲಿಯ ಆಕೆಯ ನೆನಪು ನೆಲೆಗೊಂಡಿವೆ.

----

ನನ್ನವಳು ಚೆಂದ. ಆಕೆಯ ನೆನಪು ಅಂದ.

ಎರಡೂ ಸೇರಿದಾಗ, ಅದೇನೋ ಮಧುರ ಗಾನ.

----

ನನಗೆ ಗಾಯನ ಇಷ್ಟ. ಹಾಡೋದು ಇಷ್ಟ.

ಕಷ್ಟ ಅನಿಸೋದು ಅವು ಮತ್ತೆ ಮತ್ತೆ ಕಾಡೋದು.

----

ಒಮ್ಮೆ ಪ್ರೀತಿ ಉಕ್ಕುತ್ತದೆ. ಮತ್ತೊಮ್ಮೆ ಮಂದಿಗೆ

ಸಾಗುತ್ತದೆ. ಕಾರಣ ಏನೂ ಅಂತ ತಿಳಿದಾಗ,

ಅವಳ ಮುಖವೇ ಎದೆಯಲ್ಲಿ ಹೊಳೆಯುತ್ತದೆ.

---

ಮನಸ್ಸಿನ ಮೂಲೆಯಲ್ಲಿ ಅಕೆಯದ್ದೇ ವಾಸ.

ಹೃದಯದ ಬಡಿತದಲ್ಲೂ ಅವಳದ್ದೇ ಸದ್ದು.

ಭಾವಗಳಲ್ಲಿ ಬರೋ ಅಲೆಗೆಳು ವಿಭಿನ್ನ.

ಅಲ್ಲಿ ಯಾರೋ ಇನ್ನಾರೋ ಬಂದು ಹೋಗ್ತಾರೆ.

----
-ರೇವನ್