ಪ್ರೀತಿ ಇದ್ದರೇ ನೆನಪಿರಬಹುದು.

ಗೆಳೆತನ ಇದ್ದರೇ ಮರೆಯದೇ ಇರಬಹುದು.

ನಂಬಿಕೆ ಇದ್ದರಂತೂ ಜೀವ ಬಿಡಬಹುದು.

ಗೆಳತಿ ಅದೆಲ್ಲವೂ ಇಲ್ಲದೇ ನಿನ್ನ ಹೇಗೆ

ನೆನಪಿಡಲಿ. ನೀನು ಕೇಳೊ ಪ್ರಶ್ನೆ ಅದೇ ತಾನೇ.

ನನ್ನ ಮರೆಯುತ್ತಿರೋದು ಏಕೆ ಅಂತಾ ?

ಪ್ರಶ್ನೆಗೆ ಪಶ್ನೆ ಉತ್ತರಕ್ಕೆ ಉತ್ತರ. ಈಗ

ಹುಡುಕೋ ಸಾಹಸ ನೀ ಮಾಡಲೇಬೇಡ.

ಅವರಡೂ ಈಗ ಅರ್ಥ ಕಳೆದುಕೊಂಡಿವೆ.

ನಿನ್ನ ನೆನಪು ನನ್ನ ನೋವು ಎರಡೂ

ಬೆರೆತು ಹೋಗಿವೆ. ಬದುಕಿನ ಅಂತ್ಯದಂತೆ.

ಸಾಲದ ನಿನ್ನ ಒಲವು. ನಿನ್ನ ಸೇರಲು ಒಲ್ಲದ

ಮನಸ್ಸು ಎರಡೂ ಕವಲು ದಾರಿಯಲ್ಲಿವೆ.

ಗೆಳೆತಿ ನೀ ಕೇಳ ಬೇಡ ಪ್ರಶ್ನೆ
-ರೇವನ್