ಬಂತು ಬಂತು ಸಂಕ್ರಾಂತಿ

ಶೇಂಗಾ ಹೋಳಿಗೆ ಸವಿಯಲು ಬಂತು

ಎಳ್ಳಚ್ಚಿ ರೊಟ್ಟಿ, ಎಣ್ಣಿಗಾಯಿ

ಭರ್ತದ ಚಟ್ನಿ ತಿನ್ನೊಣ ಬನ್ನಿ

 

ಜೋಳದ ಸೀತಿನಿ, ಕಡ್ಲೆಕಾಯಿ

ಹರಿವ ನದಿಯಲ್ಲಿಜಾಟ ಹಕ್ಕಿಗಳಂತೆ ಹಾರಾಟ

ಸ್ನೇಹಿತರ ಕೂಟದ ಸಂಭ್ರಮದಲ್ಲಿ

ಸಂತೋಷಕ್ಕಿಲ್ಲ  ಪಾರವೇ ಅಲ್ಲಿ

 

ಹಳ್ಳಿ ಸುಗ್ಗಿ, ಭಾರಿ ಹುಗ್ಗಿ

ಎಳ್ಳು ಬೆಲ್ಲದಚ್ಚಿನ ಹುಂಡಿ

ಹೂರಣಗಡುಬು ತಿನ್ನೋಣ ಬನ್ನಿ 

ಸೌಹಾರ್ದತೆಯ ಬೆಸೆಯೋಣ ಬನ್ನಿ