ಅಮ್ಮನ ಒಡಲು ಬರಿದಾಗಿದೆ.

ನಡು ವಯಸ್ಸಿನ ಅಮ್ಮ ಈಗ

ತಮ್ಮನ್ನೋ ತಂಗಿಯನ್ನೋ

ಹುಟ್ಟಿಸಲು ಆಗೋದಿಲ್ಲ.

 

ಅವಳಿಗೆ ಆಗಾಗ  ಹೊಟ್ಟೆ ನೋವು

ಕಾಣಿಸುತ್ತದೆ. ಅಪ್ಪ ಬಿಟ್ಟು ಹೋದ

ಕ್ಷಣದಿಂದ ಅವಳಿಗೆ ಹೃದಯದಲ್ಲೂ ನೋವು.

ಮನಸ್ಸಿನಲ್ಲಿ ನನ್ನದೇ ಚಿಂತೆ ಆಕೆಗೆ.

 

ಅಮ್ಮನಿಗೆ ನಾನು ಬೇಕು. ಅಪ್ಪನ ತದ್ರೂಪಿ

ನಾನು. ನನ್ನಲ್ಲಿ ಅಪ್ಪನ್ನ ಕಾಣುತ್ತಾಳೆ ಅಮ್ಮ.

 

ಅಪ್ಪನೋ ಅದ್ಯಾರದೋ ಹಿಂದೆ ಹೋದವನು

ಬರುವ ಮನಸ್ಸು ಮಾಡುತ್ತಿಲ್ಲ. ಅಮ್ಮನೂ ಬಾ

ಅಂತ ಕರೆಯುತ್ತಿಲ್ಲ.

 

ಮಧ್ಯೆದಲ್ಲಿ ನಾನು ನಿಂತಿದ್ದೇನೆ. ಯಾರ ಬಳಿ

ಹೋಗಬೇಕು ಅಂತ..
-ರೇವನ್