ಚಂದನದ ಗೊಂಬೆ ತಂದು ಕೊಟ್ಟೆ ನಾನು.
ಈಗ ಅದರಲ್ಲಿ ಸುಗಂಧ ಬೀರುವುದಿಲ್ಲ.
ಅವಳ ನೆನಪು ನನ್ನಲ್ಲಿ ಕಾಡುತ್ತಿದೆ.
ಬೊಂಬೆ ರೂಪದಲ್ಲಿ.
ಹೋದವಳು ಆಗ ಬರುವಳು. ಈಗ
ಬರುವಳು ಎಂಬ ನಿರೀಕ್ಷೆ ಇನ್ನೂ ಇದೆ.
-----
ನನ್ನಲ್ಲಿ ಹೊಸ ಭಾವ ಮೂಡೋದಿಲ್ಲ.
ಹಳೇಯದ್ದನ್ನೇ ತಿರುವಾ-ಮುರುವಾ ಮಾಡಿ
ಬರೆಯುತ್ತೇನೆ.
ಹೊಸತನ್ನ ಹುಡುಕುವ ಸಾಹಸ ಮಾಡಬೇಕು.
ಎಲ್ಲಿಗೆ ಹೋಗಬೇಕನ್ನೋದೇ ಕನ್ಪ್ಯೂಜನ್.
----
ಒಂದೇ ಒಂದು ಕ್ಷಣ. ನಡೆದ ಘಟನೆ.
ಖುಷಿ ಇಮ್ಮಡಿಗೊಳಿಸಿದೆ. ಮರು ಕ್ಷಣವೇ
ತೃಪ್ತಿಯ ಭಾವ ತಂದಿದೆ. ತತಕ್ಷಣವೇ ಮತ್ತೆ
ಬೇಕೆನ್ನುವ ಉತ್ಸಾಹ.
-----
ನನ್ನಲ್ಲಿ ಒಬ್ಬ ಕವಿಯಿದ್ದಾನೆ. ಅವನಿಗೆ
ಮೇಲೆ ಏಳೋ ಆಸೆ. ಆದರೆ, ಕಾಲುಗಳಿಗೆ
ಪೋಲಿಯೋ ಆಗಿದೆ. ಹೃದಯಕ್ಕೆ ಲಕ್ವಾ
ಹೊಡೆದಿದೆ.
ಅವಳು ಹೋದ ಮೇಲೆ ಮತ್ತೊಬ್ಬಳ
ನಿರೀಕ್ಷೆಯಲ್ಲಿ ಕವಿ ಕವಿತೆ ಬರೆಯುತ್ತಿದ್ದಾನೆ.
ಅರ್ಧ ರಾತ್ರಿಯ ಮುನ್ನ.
-----
ನಲಿದವರು ಸತ್ತು ಹೋಗೋದಿಲ್ಲ.
ಸತ್ತವರು ನಲಿಯುದಿಲ್ಲ. ಇರೋವಾಗಲೇ
ಜೀವಿಸಿ ಜೀವನದ ಪೂರ್ತಿ ಕ್ಷಣ.
-----
ಒಂದೇ ಟೊಂಗೆಯ ಹಕ್ಕಿಗಳು ನಾವು.
ಸೂರ್ಯ ಮೂಡೋ ಮುನ್ನ ಹಾರಾಡುವ
ಮನಸ್ಸು. ಆದರೆ, ಅಮ್ಮ ಇನ್ನೂ ಯಾಕೆ ಬಂದಿಲ್ಲ.
ಮುಸಂಜೆ ಆಗಿ ಹೋಯ್ತು.
- ರೇವನ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!