ನೀನು ಯಾವಾಗ್ಲೂ ಹೀಗೆ

ಧುತ್ತೆಂದು ಮನಸ್ಸನಲ್ಲಿ

ನುಗ್ಗಿ ಬಿಡ್ತೀಯಾ

ಅನಿಸಿದ್ದೆಲ್ಲ

ನನ್ನ ಕೈಯಲ್ಲಿ

ಬರೆಸಿಬಿಡ್ತೀಯಾ.

ಒಂದು ಸಲ ಹೇಳೆ

ಯಾವಾಗಲೂ

ನೀನೆಲ್ಲಿ ಇರ್ತೀಯಾ?

ಯಾಕೆ ಗೊತ್ತಾ,

ನಂಗೂ ನಿನ್ನ ಹಾಗೆ

ಇರಬೇಕು, ಬೇಳಿಬೇಕು.

ಕಂಡ ಕಂಡವರ

ಮನಸ್ಸನ್ನು ಹೊಕ್ಕಬೇಕು

ಎಲ್ಲ ಜಾಲಾಡಿಸಿ

ಈಚೆ ತರಬೇಕು

ನಿನ್ನಂತೆ

ನಾನಾಗಬೇಕು!