ಮೇಘನಾ ರಾಜ್. ಕನ್ನಡದ ಹುಡುಗಿ. ಅಪ್ಪಟ್ಟ ಸಿನಿಮಾ ಫ್ಯಾಮಿಲಿ ಬ್ಯಾಗ್ರೌಂಡ್. ತಂದೆ ಸುಂದರಾಜ್​. ಕಲಾವಿದರು. ತಾಯಿ ಪ್ರಮಿಳಾ ಜೋಷಾಯಿ ಕೂಡ ನಟಿ. ಅಪ್ಪ-ಅಮ್ಮನ ಮುದ್ದಿನ ಮಗಳು  ಮೇಘನಾ ರಾಜ್. ಕನ್ನಡ ಸೇರಿ ಇತರ  ಭಾಷೆಯಲ್ಲೂ  ಮೇಘನಾ ಮಿಂಚಿಂಗ್. ಟಿ.ಎಸ್.ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಮಾಯಾ ಪಾತ್ರದಲ್ಲಿ ಅಲ್ಲಮನ ಹಿಂದೆ ಬೀಳೋದು ಪಾತ್ರದ ವಿಶೇಷವಾದ ಮೋಹ. ಮೊನ್ನೆ ಅಲ್ಲಮ ಚಿತ್ರದ ಹಾಡುಗಳ ಬಿಡುಗಡೆ ಇತ್ತು. ಅವತ್ತು ಮೇಘನಾ ಸಿಕ್ಕರು.  ಮಾತಿಗೆ. ಮಾತು ಪ್ರಶ್ನೆಗಳಾದವು. ಪ್ರತಿಕ್ರಿಯೇ ಉತ್ತರ ವಾಗಿ ಬಂದವು. ಅದರ ಪುಟ್ಟ ಬರಹ ಇಲ್ಲಿದೆ. ಓದಿ.

1.
ಅಲ್ಲಮ ಚಿತ್ರದ ಮಾಯಾ ಪಾತ್ರದ ಎಕ್ಸಪಿರಿಯೆನ್ಸ್ ಹೇಗಿದೆ ?

ತುಂಬಾ ಚಾಲೆಂಜಿಂಗ್. ಒಂದು ರೀತಿ ಎಕ್ಸಾಮ್ ಬರೆದ ಹಾಗೆ ಇತ್ತು.

2.
ಟಿ.ಎಸ್.ನಾಗಾಭರಣರು ನಟನೆ ಟಿಪ್ಸ್ ಕೊಟ್ಟರಾ ?

ಟಿಪ್ಸ್ ಅಂತ ಕೊಡಲಿಲ್ಲ. ಆದರೆ, ಭರಣ ಅಂಕಲ್ ನಿಜಕ್ಕೂ  ಸೂಪರ್. ಕಲಾವಿದರಿಗೆ ಆಪ್ತವಾಗಿ ಹೇಳಿಕೊಡ್ತಾರೆ. ತಮಗೆ ಬೇಕಿರೋದನ್ನ ಅಭಿನಯಿಸಿಯೇ ತೋರುತ್ತಾರೆ.

3.
ಇತ್ತೀಚಿಗೆ ಕೇಳಿದ ಒಳ್ಳೆ ಕಥೆ ಹಾಗೂ ಕೆಟ್ಟ ಕಥೆ ?

ಒಳ್ಳೆ ಕಥೆ ಕೆಟ್ಟ ಕಥೆ ಅಂತ ಇರೋದಿಲ್ಲ. ಒಳ್ಳೆ ಕಥೆಯನ್ನ ಕೆಟ್ಟದಾಗಿ ಮಾಡಿದರೆ ಕೆಟ್ಟ ಸಿನಿಮಾ ಆಗುತ್ತದೆ ಅಷ್ಟೆ.ಕೆಟ್ಟ ಕಥೆಯನ್ನ ಒಳ್ಳೆ ಸಿನಿಮಾ ಆಗಿಸಬಹುದು ಅಲ್ಲವೆ ?

4.
ಮೇಘನಾ ಇಷ್ಟಪಡೋ ಫುಡ್ ಯಾವುದು ?

ನನಗೆ...!  ಮೊಸರನ್ನ ಇಷ್ಟ. ತುಂಬಾ ಇಷ್ಟ.

5.
ಡ್ರೆಸ್​ ನಲ್ಲಿ ಸಾರಿ ಇಷ್ಟಾನಾ ? ಚೂಡಿ ಇಷ್ಟಾನಾ ?

ಸಾರಿ ಅಂತೆನೂ ಇಲ್ಲ. ಜೀನ್ಸ್-ಟಿ ಶರ್ಟ್ ಅಚ್ಚು-ಮೆಚ್ಚು.

6.
ನೀವು ಯಾರ್ ಜತೆ ಕಂಫರ್ಟ್ ಆಗಿರುತ್ತಿರೀ ?

ನನ್ನ ಸ್ಕೂಲ್ ಫ್ರೆಂಡ್ಸ್. ಮತ್ತು ಕಾಲೇಜ್ ಫ್ರೆಂಡ್ಸ್. ನಮ್ಮದೊಂದು ಗ್ಯಾಂಗ್ ಇದೆ. ಅಲ್ಲಿ ನಾನು ತುಂಬಾ ಕಂಫರ್ಟ್. ಆ ಗ್ಯಾಂಗ್ ಬಿಟ್ಟು ಎಂದೂ ಹೊರಗೆ ಬರೋಕೆ ಇಷ್ಟಪಡೋದಿಲ್ಲ. ಬರೋದು ಇಲ್ಲ ಬಿಡಿ.

7.
ನಿಮ್ಮ ನೆಚ್ಚಿನ ಕನ್ನಡದ ನಾಯಕ ಹಾಗೂ ನಾಯಕಿ ಯಾರು ?

ನನಗೆ ಕನ್ನಡದಲ್ಲಿ  ವಿಷ್ಣವರ್ಧನ್ ಅಂಕಲ್  ಇಷ್ಟ. ಅವರೊಟ್ಟಿಗೆ ನಟಿಸಬೇಕೆಂದು ಆಸೆ ಇತ್ತು. ನಾಯಕಿಯರಲ್ಲಿ ಈಗೀನವರೆಲ್ಲರೂ ಇಷ್ಟ. ಆದರೆ, ಮಾಲಾಶ್ರೀ ಅವರು ಅಚ್ಚು-ಮೆಚ್ಚು.
- ರೇವನ್ ಪಿ.ಜೇವೂರ್​