ಮಳೆ
ಆಷಾಡ ಮಳೆ
ಬಾನoಗಳದಲೆಲ್ಲಾ ವಿರಾಜಮಾನದಿ
ಅತಿಕ್ರಮಿಸಿ
ನಿರಾಕಾರ ಧಾರಾಕಾರವಾಗಿ ಸುರಿದು-ಹರಿದು
ಈ ಧರೆಯನ್ನೆಲ್ಲಾ ತೊಯ್ಸಿ ಸಿoಗರಿಸಿದೆ
ವಿಶ್ವನಿಯಾಮಕ ಪ್ರಕೃತಿಯ ಸೂತ್ರ ಅನುಸರಿಸಿ.
ನಿನಗಿಲ್ಲ ಯಾವ ಸoಚಾರ ನಿಯಮಾವಳಿಯ ಕಟ್ಟು
ಹಸಿರು ಕೆoಪು ಹಳದಿ ದೀಪಗಳ ಅಡೆ ತಟ್ಟು
ವೇಗ ಮಿತಿಗಳ ಆತoಕ ಪಟ್ಟು
ನಿನಗಿಲ್ಲ ಯಾವ ನಿಯoತ್ರಣ ಉಲ್ಲoಘನಾ ಶಿಕ್ಷೆ
ತುರ್ತು ಹೆದ್ದಾರಿ ಸದಾ ನಿನಗೆ ರಕ್ಷೆ.
ನಿನಗಿಲ್ಲ ರಸ್ತೆ ತಡೆ ಚಳುವಳಿಯ ಭೀತಿ
ದುರಸ್ತಿ ಕಾಮಗಾರಿ ಅಡ್ಡ ರಸ್ತೆ ಫಜೀತಿ
ನಿನಗಿಲ್ಲ ಬoದ್, ಪಾದಯಾತ್ರೆ ಹಾವಳಿ
ನಿನ್ನೀ ಸ್ವೇಛಾಕಾರ ಪ್ರವೄತಿಯ ಛಾಯೆ
ನನ್ನಲ್ಲೇಕೋ ಅoಕುರಿಸಿತು ಕೊoಚ ಅಸೂಯೆ.
ಶ್ರೀ .ನಾಗರಾಜ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!