ನನ್ನ ಎದೆಯ ಗುಡಿಸಿಲಿಗೆ

ಪ್ರೀತಿಯ ಸೀರೆಯ ತೊಟ್ಟು ಬಂದವಳೆ, 

ಇಂದು ಅದಕ್ಕೆ ಬೆಂಕಿಯ ಇಟ್ಟು ಹೋದೆಯಾ.

 

ಮನದಲ್ಲಿ ಕನಸಿನ ಕೋಟೆಯ ಕಟ್ಟಿದವಳೆ, 

ಇಂದು ಅದನ್ನೇ ಛಿದ್ರಿಸಿ  ಹೋದೆಯಾ.

 

ಪ್ರೇಮ ಲೋಕವ ಸೃಷ್ಟಿಸಿದವಳೆ,

ಇಂದು ಬರೀ ನೋವನ್ನು  ಉಳಿಸಿ ಹೋದೆಯಾ,

 

ನಂಬಿಕೆಗೆ  ರೂಪವ ನೀಡಿದವಳೆ,

ಕಡೆಗೆ ಮೋಸಕ್ಕೆ ಹೆಸರಾಗಿ ಹೋದೆಯಾ,

 

ಮುದ್ದಾದ ಮಾತಿನಲ್ಲಿಯೇ ಹೃದಯ ಸೇರಿದವಳೆ,

ವಾಸಿಯಾಗದ ಗಾಯವ ಮಾಡಿ ಹೋದೆಯಾ.

 

ಈ ಚೂರಾದ ಹೃದಯದ ಒಂದೇ ಆಸೆ,
ಎಂದಿಗೂ ಬಾಡದಿರಲಿ ನಿನ್ನಯ ನಗು.

 

ಗೆಳತಿ ದೂರ ಹೋಗುವ ಮುನ್ನ

ನೀನಾಡಿದ ಈ  ನಾಟಕಕ್ಕೆ ಕಾರಣವ ಹೇಳಬಾರದೇ.

ನಾ ಹೇಗೆ ಮರೆಯಲ್ಲಿ ನಿನ್ನ ಎಂದಾದರು ತಿಳಿಸಬಾರದೆ.