ಪಿಕಪ್ ಎಲ್ಲಿ ಎಂದು ಟ್ಯಾಕ್ಸಿ ಡ್ರೈವರಿಗೆ ತಿಳಿಸಿದ ಪ್ರೊಫೆಸರ್ ಸಾಹೇಬರಿಗೆ

ಡ್ರೈವರ್ ಕೇಳಿದ, 

“ಎಲ್ಲಿಗೆ ಸಾರ್ ಟ್ರಿಪ್ಪು?” 

ಪ್ರೊಫೆಸರ್ ಸಾಹೇಬರು ಫೋನ್ ಕಟ್ ಮಾಡಿಬಿಟ್ಟರು. 

ಅತ್ತ ಡ್ರೈವರಿನಿಂದ ಮತ್ತೊಮ್ಮೆ ಫೋನ್ ಕಾಲ್ ಬಂದಿತು.

“ಎಲ್ಲಿಗೆ ಸಾರ್ ಟ್ರಿಪ್ಪು? ಡ್ರಾಪ್ ಲೊಕೇಶನ್ ಹೇಳಿಬಿಡಿ.”

ಪ್ರೊಫೆಸರ್ ಹೇಳಿದರು, “ಸಿಗ್ನಲ್ ಸರಿ ಇಲ್ಲ, ಮೊದಲು ಬಂದು ಪಿಕಪ್ ಮಾಡಿ - ಆಮೇಲೆ ಹೇಳ್ತೀನಿ”. 

 

ಸ್ವಲ್ಪ ಹೊತ್ತಿನ ನಂತರ ಟ್ಯಾಕ್ಸಿ ಹತ್ತಿ ಕುಳಿತ ಪ್ರೊಫೆಸರ್, “ನಡೀರಿ ಕನಕಪುರ ರಸ್ತೆಗೆ” ಎಂದು ಹೇಳಿದರು. 

ಡ್ರೈವರಿನ ಮುಖ ದಪ್ಪಗಾಯಿತು. “ಸಾರ್, ಅದಕ್ಕೇನೆ ಡ್ರಾಪ್ ಲೊಕೇಶನ್ ಕೇಳಿದ್ದು. ಏರ್ಪೋರ್ಟ್ ಡ್ರಾಪ್ ಇದ್ದರೆ ಮಾತ್ರ ಬರ್ತಿದ್ದೆ.” 

ಇದನ್ನು ಕೇಳಿದ ಪ್ರೊಫೆಸರ್ ಗಟ್ಟಿಯಾಗಿ ಡ್ರೈವರಿಗೆ ಹೀಗೆ ಹೇಳಿದರು:

“ಒಂದೂವರೆ ಗಂಟೆಯಿಂದ ಕಾಯುತ್ತಿದ್ದೇನೆ. ತುರ್ತು ಆಸ್ಪತ್ರೆಗೆ ಹೋಗುವುದಿದೆ. ಎಲ್ಲ ಟ್ಯಾಕ್ಸಿ ಡ್ರೈವರುಗಳೂ ಹೀಗೇ ಏನೋ ಒಂದು ಹೇಳಿ ಬರುತ್ತಿಲ್ಲ. ಸುಮ್ಮನೆ ನಡೀರಿ”.