ಹುಡುಗಿ ನೀನು ಎಂದು ಬರುವೆ
ನಿನಗೆ ನಾನು ಕಾಯುತಿರುವೆ
ಬಿಳಿಯ ಮೋಡ ಸಾಗುತಿರಲು
ನಿನ್ನ ಮುಖವೆ ಕಂಡೆನಲ್ಲಿ
ಕೆಂಪು ತುಟಿಯು ನಿನ್ನ ಮೊಗದಿ
ಮಾತು ಚಂದ ಮುಗುಳೆ ಅಂದ
ನಯನಗಳಲಿ ತುಂಬು ಪ್ರೀತಿ
ನಿನ್ನೆ ನೋಡುತಿರುವ ಬಯಕೆ
ನಿನ್ನ ಜೊತೆಯಲಿದ್ದರಾನು
ನೆನಪೆ ಬರದು ಬೇರೆ ಏನು
ನಿನ್ನ ಕಾಣುವಾಸೆ ನನಗೆ
ಕಣ್ಣ ಮುಚ್ಚಿ ಕಲ್ಪಿಸಿರುವೆ
ನನಗೆ ಜೀವದುಸಿರು ನೀನು
ನೀನೆ ನನ್ನ ಬಾಳ ಹಸಿರು
ಹುಡುಗಿ ನೀನು ಎಂದು ಬರುವೆ
ನಿನಗೆ ನಾನು ಕಾಯುತಿರುವೆ
- ಸಚಿನ್. ಎಲ್. ಎಸ್
(ಚಿತ್ರ ಕೃಪೆ: Google)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!