ನನ್ನೆದೆಯ ಬಾಂದಳದ
ಓ ನನ್ನ ಪುಷ್ಪವೇ
ಬಾಡದಿರು ಎಂದೂ ,
ನಾನೆಂದು ಬಿಡೆನು
ಬಾಡಲು ನೊಂದು ...
ನಾ ಹೋಗಲಿಲ್ಲ ಅರಸಿ
ಸಕಲ ಪುಷ್ಪಗಳೊಳಗೆ .
ನೀನಾಗೆ ಬಂದು ಸೇರಿದೆ,
ನನ್ನ ಮನ ನಿರಾಕರಿಸುವುದೇ
ಮಲ್ಲಿಗೆಯೇ ತಾನಾಗಿ ಬಂದು ಸೇರಿದೊಡೆ
ನೀ ಬಂದ ಮೇಲೆ ತಿಳಿದಿದು
ನನಗು ಒಂದು ಮನಸಿದೆಯೆಂದು
ಮನಸ ತೋರಿದ ಪ್ರೀತಿಯ ಮನಸಿಗೆಂದು
ಬಯಸುವೆ ಎಂದೆಂದೂ ನೋವಾಗಬಾರದೆಂದು
ಬೋ. ಕು .ವಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!