ಕಾಡುತಿಹೆ ನೆನಪು ಮತ್ತೆ ಮತ್ತೆ

ಕಾಲನ ಹಿಂದಕೆ ಎಳೆಯುತ್ತಿದೆ ಮೀಟಿ ಮೀಟಿ

ನೆನಪಿನ ಭಾರಕೆ ಹೃದಯ ಅಳುತ್ತಿದೆ ಮೆಲ್ಲಗೆ

ಇಳಿಸಂಜೆಯ ಹೊತ್ತಿಗೆ ತಂಪೆರೆದ

ಹನಿಮಳೆಗೆ ಬೀರಿದೆ ಕೆಮ್ಮಣ್ಣಿನ ಪರಿಮಳದ

ಕಂಪಿನ ನೆನಪು,

ನಾ ನಿಂತಲ್ಲೇ ಆಗ್ರಾಣಿಸಿದೆ ಕ್ಷಣ ಹೊತ್ತು,

ಆಹಾ ಎಂತಹ ಮಧುರ ನೆನಪು

ಮನಸು ಹೇಳುತ್ತಿದೆ ಹೀಗೆ ಪುನಾರವರ್ತಿಸಲಿ ಎಂದು.

ಎಗ್ಗಿಲ್ಲದೆ ಹುಡುಕುತ್ತಿದೆ ನೆನಪಿನ ಪುಸ್ತಕ ತಿರುವಿ ತಿರುವಿ

ಸಿಹಿ ಕಹಿ ಘಟನೆಗಳ ನೆನಪು ಮೆಲುಕಲು

ಮಸ್ತಕದಲ್ಲಿ ಸಿಹಿಕಹಿಯ ಅಶ್ರುಧಾರೆ ಕೆನ್ನೆಯ  ಮೇಲೆ ಜಾರಲು

ಹೃದಯ ಹಗುರಾಗುತ್ತಿದೆ  ನವಿರಾದ ಭಾವನೆಗಳ ಕೆದಕಿ.

- ಪ್ರೀತಮ್ ನಡುಮನೆ