1.ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ,ಮೈದಾ ಹಿಟ್ಟಿಗೆ ಹಾಕಿ ,ಚಿಟಿಕಿ ಉಪ್ಪು ಸೇರಿಸಿ ,ನೀರು ಹಾಕಿ ಹದವಾಗಿ ಕಲಸಿ[ಚಪಾತಿ ಹಿಟ್ಟಿನ ಹದ] . ಕನಿಷ್ಟ ಅರ್ಧ ಗಂಟೆ ನೆನೆದರ ಒಳ್ಳೆಯದು. 

2.ಕಡ್ಲೆಬೀಜವನ್ನು ಬಾಣಲಿಯಲ್ಲಿ ಹಾಕಿ ಉರಿದುಕೊಳ್ಳಿ,ಸ್ವಲ್ಪ ಕೆಂಪಾಗುವಷ್ಟು , ನಂತರ ಬೇರೆ ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ. ಎಳ್ಳನ್ನು ಬಾಣಲಿಗೆ ಹಾಕಿ , ಸ್ವಲ್ಪ ಸಿಡಿಯಲು ಶುರುವಾದಾಗ ,ಅದೇ ಪಾತ್ರೆಗೆ ಅಥವಾ ಬೇರೆ ಪಾತ್ರೆಗೆ ತಣ್ಣಗಾಗಲು ಹಾಕಿ. ಬಿಸಿ ಇದ್ದಾಗಲೇ ಪುಡಿ ಮಾಡಿಕೊಂಡರೆ ಪುಡಿ ಮೆತ್ತಗಾಗಿ ಅಂಟುತ್ತದೆ , ಹಾಗಾಗಿ ಕನಿಷ್ಟ 15 ನಿಮಿಷ ಬಿಡಿ ಅಷ್ಟರಲ್ಲಿ ತಣ್ಣಗಾಗಿರುತ್ತವೆ.  ನಂತರ ಬಿಡಿಸಿಟ್ಟ ಏಲಕ್ಕಿ ,ಮುಕ್ಕಾಲು ಕಪ್ ಬೆಲ್ಲ [ಪುಡಿ ಮಾಡಿಕೊಳ್ಳಿ ಚಿತ್ರದಲ್ಲಿ ತೋರಿಸಿದಂತೆ] ,ಸಿಹಿ ಜಾಸ್ತಿ ಬೇಕೆನ್ನಿಸಿದರೆ ೧ ಕಪ್ ಗೆ 1/2 ಇಂಚ್ ಕಡಿಮೆ ಯಷ್ಟು ಬೆಲ್ಲ , ಉರಿದಿಟ್ಟ ಕಡ್ಲೆಬೀಜ ಮತ್ತು ಎಳ್ಳನ್ನು ಒಂದು ಜಾರ್ ಗೆ ಹಾಕೊಂಡು , ಪುಡಿ ಮಾಡಿಕೊಳ್ಳಿ . 
ಸೂಚನೆ : ಪುಡಿ ಮಾಡುವಾಗ ಒಂದೇ ಬಾರಿಗೆ ಮಿಕ್ಸಿ ಆನ್ ಮಾಡಿ ಮಾಡಬಾರದು , ೫ ಸೆಕೆಂಡ್ಸ್ ಮಾಡಿ ಮತ್ತೆ ಚಮಚದಲ್ಲಿ ಕೈಯಾಡಿಸಿ ಮತ್ತೆ ಪುಡಿ ಮಾಡಿ , ಹೀಗಾಗಿ ಎಲ್ಲ ಹದವಾಗಿ ಆಗುತ್ತೆ , ಒಂದೇ ಕಡೆ ಮೆತ್ತಗಾಗಲ್ಲ .  ಪುಡಿ ತುಂಬಾ ನುಣುಪಾಗಬಾರದು , ಸ್ವಲ್ಪ ತರಿಯಾಗಿ ಅಂದ್ರೆ ಸಣ್ಣ ರವೆಯಷ್ಟು . 

 

3.ನಂತರ ಈ  ಪುಡಿಗೆ ಸ್ವಲ್ಪವೇ ನೀರು ಹಾಕಿ ಕಲಸಿ ಉಂಡೆ ಮಾಡಿಕೊಳ್ಳಿ [ ಬೆಲ್ಲ ಇರುವುದರಿಂದ  ನೀರು ಹೆಚ್ಚು ಅವಶ್ಯಕತೆ ಇರುವುದಿಲ್ಲ ಸ್ವಲ್ಪ ಸ್ವಲ್ಪ ಹಾಕಿ ಹದವಾಗಿ ಕಲಸಿ].

 

4.ಕಲಸಿಟ್ಟ ಮೈದಾ ಇಂದ ಉಂಡೆ ಮಾಡಿಕೊಂಡು ಸ್ವಲ್ಪ ಲಟ್ಟಿಸಿ ನಂತರ ಊರ್ಣದ ಉಂಡೆ ಇಟ್ಟು ಮುದಿಡಿ ಉಂಡೆ ಮಾಡಿ ,ಮತ್ತೆ ಲಟ್ಟಿಸಿ. 

 

5.ಕಾವಲಿ ಮೇಲೆ ಹಾಕಿ ಸಣ್ಣ ಉರಿಯಲಿ ಬೇಯಿಸಿ. ಬೇಯಿಸುವಾಗ ಎಣ್ಣೆ ಹಾಕಬಾರದು. 

 

ರುಚಿಯಾದ ಈ ಹೋಳಿಗೆಯನ್ನು ತಿಂಗಳುವರೆಗೂ ಇಡಬಹುದು.  ತಿನ್ನುವಾಗ ತುಪ್ಪದ ಜೊತೆ ಇನ್ನು ರುಚಿಯಾಗಿರುತ್ತೆ 

 

                                                                                                      --ಬೋ .ಕು .ವಿ