ಗುರು ತೊರಿದ ಜ್ಞಾನದ ದಾರಿ

ಶಾಲೆ ನಮ್ಮ ದೇವರ ಅಂಗಳು

ಲಿಂಗದಂತೆ ಅಲ್ಲಿ ಇರುವ ಗುರುಗಳು

ತೋರಿಸುವರು ಒಳ್ಳೆಯ ದಾರಿಗಳು

ಭಕ್ತರಂತೆ ಇರುವರು ವಿದ್ಯಾರ್ಥಿಗಳು

ಕಲಿಯಿರಿ ಒಳ್ಳೆಯ ಜ್ಞಾನದ ಸಾಧನೆಗಳು

ಮಾಡಿರಿ ಸಮಾಜವ ಮೆಚ್ಚುವ ಕೆಲಸಗಳು

ಎಲ್ಲರ ಪ್ರೀತಿಯ ಭಾವನೆ

ಕಲಿಯಿರಿ ನೀವು ಸುಮ್ಮನೆ

ಸಾಧನೆ ನಮ್ಮಯ ಪ್ರಾರ್ಥನೆ

ಕನಸೆ ನಮ್ಮದು ಕಲ್ಪನೆ

ಓದೊದೇ ನಮ್ಮಯ ಪ್ರೇರಣೆ ಎಂಬುದನೆ

ಕಲಿಕೆಯೆ ನಮ್ಮಯ ಸಾಧನೆ

ಶಾಲೆ ದೇವರ ಮನೆ

ಹೂ ಬಿಡುವುದು ದಾರಿಯಲಿ ಸುವಾಸನೆ

ಗುರುಗಳು ಹೇಳುವರು ಬೋಧನೆ

ದೇವರು ಇರುವನು ಒಬ್ಬನೇ

ಪೂಜಿಸುವೆವು ನಾವು ಅವನೇ

ನಮಗೆಲ್ಲ ದಾರಿ ತೋರುವವನು ಅವನೇ

ನೀಡಿದ ಜ್ಞಾನವನ್ನು ಪಡೆದ ನಾವುಗಳು

ಕನಸೇ ಕಂಡ ನಮ್ಮಯ ಗುರುಗಳು

ಸಾಧಿಸೊ ಛವ ತುಂಬಿದ ಗುರುಗಳು

ಸಾಧಿಸಿದೆವೊ ನಮ್ಮಯ ಗುರಿಯನ್ನು

ಪಡೆದೆವೊ ನನ್ನಯ ಜ್ಞಾನದಿಂದ ಗುರಿಯನ್ನು

ಕಂಡೆವೊ ನನ್ನಯ ಜ್ಞಾನದ ಗುರಿಯನ್ನು

ಕಲಿಸಿದ ಗುರುಗಳಿಗೆ ವಂದಿಸುವೆನು

ಗುರುಗಳಿಗೆ ವಂದಿಸುವೆನು ವಂದಿಸುವೆನು

ನನ್ನಯ ಗುರುಗಳಿಗೆ ವಂದಿಸುವೆನು