ನೀನು ಬ್ರಾಹ್ಮಣನೋ ಇಲ್ಲ ಶೂದ್ರನೋ?

ಕೇಳಿದರು ಸಮಾಜವಾದಿಗಳು.

ನೀನು ಆಸ್ತಿಕನೋ ಇಲ್ಲ ನಾಸ್ತಿಕನೋ?

ಕೇಳಿದರು ಧರ್ಮಶಾಸ್ತ್ರಜ್ಞರು.

ನೀನು ರಾಷ್ಟ್ರವಾದಿಯೋ ಇಲ್ಲ ನಕ್ಸಲನೋ?

ಕೇಳಿದರು ರಾಜ್ಯಶಾಸ್ತ್ರಜ್ಞರು.

ನೀನು ಸ್ವದೇಶಿಯೋ ಇಲ್ಲ ವಿದೇಶಿಯೋ?

ಕೇಳಿದರು ದೇಶಪ್ರೇಮಿಗಳು.

ಹುಟ್ಟು ಸಾವಿನ ನಡುವೆ

ನಾ ಹೊತ್ತ ಹಲವು ಗುರುತಗಳ ನಡುವೆ,

ನೀನೂ ಮನುಷ್ಯನೇ ಅಲ್ಲವೇ?

ಎಂದವರ ಕಾಣೆನಲ್ಲ.

-ವಿಶ್ವನಾಥ್